CONNECT WITH US  
echo "sudina logo";

ವಾಲ್‌ಮಾರ್ಟ್‌ನಲ್ಲಿ ಬಿದ್ದವನಿಗೆ 75ಲಕ್ಷ ರೂ.ಪರಿಹಾರ

ಯಾರದೋ ತಪ್ಪಿನಿಂದ ಇನ್ಯಾರೋ ತೊಂದರೆಗೊಳಗಾದರೆ ಹೆಚ್ಚೆಂದರೆ ಎಷ್ಟು ಮೊತ್ತದ ಪರಿಹಾರ ದೊರಕ ಬಹುದು? ಹೆಚ್ಚೆಂದರೆ ಆಸ್ಪತ್ರೆಯ ಖರ್ಚು ಪಾವತಿ ಮಾಡಬಹುದು. ಆದರೆ ಅಮೆರಿಕದ ನಿವೃತ್ತ ಸೈನಿಕರು ತಮ್ಮ ಸೊಂಟ ಮುರಿದುಕೊಂಡಿದ್ದಕ್ಕೆ 75 ಲಕ್ಷ ರೂ.ಪರಿಹಾರ ಪಡೆದಿದ್ದಾರೆ. 

ವಾಲ್‌ಮಾರ್ಟ್‌ ಮಳಿಗೆಯಲ್ಲಿ ಕಲ್ಲಂಗಡಿ ಹಣ್ಣು ಎತ್ತಲು ಹೋಗಿ ಮಾಜಿ ಸೈನಿಕ ಹೆನ್ರಿ ವಾಕರ್‌(59) ಹಣ್ಣು ಇಟ್ಟಿದ್ದ ಜಾಗದಲ್ಲಿದ್ದ ಮರದ ಹಲಗೆ ಮೇಲೆ ಕಾಲಿಟ್ಟಿದ್ದರಿಂದ ಬಿದ್ದರು. ಇದರಿಂದಾಗಿ ಅದರಿಂದ ಸೊಂಟಕ್ಕೆ ಗಾಯವಾಯಿತು. ವಾಲ್‌ಮಾರ್ಟ್‌ ವಿರುದ್ಧ ಹೆನ್ರಿ ಕೋರ್ಟ್‌ ಮೆಟ್ಟಿಲೇರದರು.

ಹೆನ್ರಿ ಪರ ವಾದ ಮಂಡಿಸಿದ ವಕೀಲ, ಹೆನ್ರಿ ಇದಕ್ಕೂ ಮೊದಲು ವಾರದಲ್ಲಿ 3 ದಿನಗಳು ಬ್ಯಾಸ್ಕೆಟ್‌ ಬಾಲ್‌ ಆಡುತ್ತಿದ್ದರು. ಈಗ ವಾಕರ್‌ ಸಹಾಯದಿಂದ ನಡೆದಾಡುತ್ತಿದ್ದಾರೆ. ತನಗೆ 75 ಲಕ್ಷ ಪರಿಹಾರ ನೀಡಲೇ ಬೇಕೆಂದು ಒತ್ತಾಯಿಸಿದರು. ಅಲಬಾಮಾ
ಕೋರ್ಟ್‌ ನ್ಯಾಯಾಧೀಶರು ವಾಲ್‌ಮಾರ್ಟ್‌ ಮಳಿಗೆಗೆ ವಾಕರ್‌ಗೆ 75 ಲಕ್ಷ ನೀಡುವಂತೆ ಆದೇಶಿಸಿದೆ.

Trending videos

Back to Top