CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ವಿಚಾರಣೆ ತಪ್ಪಿಸಿಕೊಳ್ಳುವ ತಂತ್ರಕ್ಕೆ ಬೇಸ್ತು ಬಿದ್ದರು

ಸತತವಾಗಿ ಹೂಸು ಬಿಟ್ಟ

ಪೊಲೀಸರಿಂದ ವಿಚಾರಣೆ ತಪ್ಪಿಸಿಕೊಳ್ಳಲು ಬಂಧನಕ್ಕೆ ಒಳಗಾದವರು ಎದೆ ನೋವು ಎಂದು ನೆಪ ಹೇಳಿ ಆಸ್ಪತ್ರೆಗೆ
ದಾಖಲಾಗುವವರನ್ನು ನೋಡುತ್ತೇವೆ. ಆದರೆ ಅಮೆರಿಕದಲ್ಲಿ ಆಪಾದಿತನೊಬ್ಬ ವಿಚಾರಣೆ ತಪ್ಪಿಸಿಕೊಳ್ಳಲು
ವಿಭಿನ್ನ ಮಾರ್ಗ ಹಿಡಿದಿದ್ದು ಈಗ ಸುದ್ದಿಯಾಗಿದೆ.

ಆತ ಮಾಡಿದ ತಂತ್ರ ಏನೆಂದರೆ, ಅಧಿಕಾರಿ ವಿಚಾರಣೆ ಆರಂಭಿಸುತ್ತಿದ್ದಂತೆಯೇ ಸತತವಾಗಿ ಹೂಸಲು ಆರಂಭಿಸಿದ. ಆತ ತನ್ನ ತಂತ್ರದಲ್ಲಿ ಯಶಸ್ವಿಯಾದ ಕೂಡ. ಆತನ ಹೂಸುವಿಕೆಯಿಂದ ಅಸಹ್ಯಕ್ಕೊಳಗಾದ ಅಧಿಕಾರಿ ಇನ್ನು ವಿಚಾರಣೆ ನಡೆಸಲಾಗುವುದಿಲ್ಲ ಎಂದು ಎದ್ದೇ ಬಿಟ್ಟರು.

ಈ ರೀತಿಯ ತಂತ್ರಹೂಡಿದ ಆಪಾದಿತನ ಹೆಸರು ಸಿಯಾನ್‌ ಸಕೈಸ್‌ ಜ್ಯೂನಿಯರ್‌. ಈತನನ್ನು ಮಾದಕ ದ್ರವ್ಯಗಳನ್ನು ಮಾರಾಟ ಮಾಡುತ್ತಿದ್ದ ಶಂಖೆಯ ಮೇಲೆ ಕೋರ್ಟ್‌ನಲ್ಲಿ ವಿಚಾರಣೆಗೆ ಒಳಪಡಿಸಲಾಗಿತ್ತು. ಅಧಿಕಾರಿಯೊಬ್ಬರು ಅವರ ವಿಚಾರಣೆ ನಡೆಸುತ್ತಿದ್ದರು. ಆದರೆ ವಿಚಾರಣೆ ನಡೆಸಲು ಸಾಧ್ಯವಾಗದೇ ಅವರು ಕೋರ್ಟ್‌ಗೆ "ಆತ ಸತತವಾಗಿ ಹೂಸು ಬಿಡುತ್ತಿದ್ದುದರಿಂದ ಪ್ರಶ್ನೆಗಳನ್ನು ಕೇಳಲು ಸಾಧ್ಯವಾಗಲಿಲ್ಲ. ಆತ ತಾನು ನಿರಪರಾಧಿ ಎಂದು ಹೇಳಿದ್ದಾನೆ' ವರದಿ ಸಲ್ಲಿಸಿದ್ದಾರೆ.

ಇಂದು ಹೆಚ್ಚು ಓದಿದ್ದು

ಹಿಂದೂ ಸಮಾಜೋತ್ಸವಕ್ಕೆ ಎಂಜಿಎಂ ಮೈದಾನದಲ್ಲಿ ಭರದ ಸಿದ್ಧತೆ ನಡೆದಿದೆ.

Nov 25, 2017 08:18am

ಧರ್ಮಸಂಸದ್‌ ಆರಂಭದಲ್ಲಿ ಭಾರತಮಾತೆ ಪ್ರತಿಮೆಗೆ ಪುಷ್ಪಾರ್ಚನೆ ನಡೆಸಲಾಯಿತು.

Nov 25, 2017 08:10am
Back to Top