459 ಸ್ಟ್ರಾಗಳನ್ನು ಬಾಯಲ್ಲಿ ತುರುಕಿಕೊಂಡು ದಾಖಲೆ
Team Udayavani, Nov 22, 2017, 4:16 AM IST
ಜನ ಗಿನ್ನೆಸ್ ದಾಖಲೆಗೆ ಸೇರಲು ಊಹಿಸಲೂ ಸಾಧ್ಯ ವಾಗದಂಥ ವಿಚಿತ್ರ ಪ್ರಯೋಗಗಳನ್ನು ಮಾಡುತ್ತಿದ್ದಾರೆ. ಒಡಿಶಾದ ಮನೋಜ್ ಕುಮಾರ್(23) ಎಂಬಾತ 459 ಸ್ಟ್ರಾಗಳನ್ನು ಒಟ್ಟಿಗೇ ಬಾಯಲ್ಲಿ ತುರುಕಿ ಕೊಂಡು, 10 ಸೆಕೆಂಡುಗಳ ಕಾಲ ಬಾಯಲ್ಲಿ ಇರಿಸಿ ಕೊಂಡು ದಾಖಲೆ ಬರೆದಿದ್ದಾರೆ.
ಇಂಥ ವಿಚಿತ್ರವಾದ ಸಾಧನೆ ಮಾಡಿದವರಲ್ಲಿ ಮನೋಜ್ ಕುಮಾರ್ ಮೊದಲಿ ಗರಲ್ಲ. 8 ವರ್ಷದ ಕೆಳಗೆ ಸಿಮೋನ್ ರಲ್ಮೋರ್ ಎಂಬು ವವರು ಬಾಯಲ್ಲಿ ಸ್ಟ್ರಾ ತುರುಕಿಕೊಂಡು ಗಿನ್ನೆಸ್ ದಾಖಲೆ ಬರೆದಿದ್ದರು. ಈ ವಿಷಯ ತಿಳಿದಾಗಿನಿಂದ
ಮನೋಜ್, ತಾವು ಇಂಥದ್ದೊಂದು ಪ್ರಯೋಗ ಮಾಡಿ ಸಿಮೋನ್ ದಾಖಲೆಯನ್ನು ಅಳಿಸುವ ಕನಸು ಕಂಡಿದ್ದರಂತೆ.
ಈಗ ಆ ಕನಸನ್ನು ನನಸಾಗಿ ಸಿಕೊಂಡಿದ್ದಾರೆ.