50 ದಶಕಗಳ ನಂತರ ಚಿಗುರಿದ ಕನಸು! | Udayavani - ಉದಯವಾಣಿ
   CONNECT WITH US  
echo "sudina logo";

50 ದಶಕಗಳ ನಂತರ ಚಿಗುರಿದ ಕನಸು!

ಕಲಿಕೆಗೆ ವಯಸ್ಸಿನ ಮಿತಿಯಿಲ್ಲ ಎಂಬುದನ್ನು ಚೆನ್ನೈನ ಎಂ.ಚೆಲ್ಲತೈ (77 ವರ್ಷ) ಸಾಬೀತುಪಡಿಸಿದ್ದಾರೆ. ಸುಮಾರು 50 ವರ್ಷಗಳ ಹಿಂದೆಯೇ ಅವರು ಕಂಡಿದ್ದ ಉನ್ನತ ವ್ಯಾಸಂಗದ ಆಸೆಯನ್ನು ಮೊದಲು ಅವರ ತಂದೆ, ಆನಂತರ ಅವರ ಪತಿ ಚಿವುಟಿ ಹಾಕಿದ್ದರಂತೆ. ಆಗ 10ನೇ ತರಗತಿ ಪಾಸ್‌ ಆಗಿದ್ದರಿಂದ ಕ್ಲರ್ಕ್‌ ಆಗಿ ಸರ್ಕಾರಿ ಸೇವೆಗೆ ಹೋಗಿದ್ದ ಆಕೆ ಇತ್ತೀಚೆಗೆ ಸೇವೆಯಿಂದ ನಿವೃತ್ತಿಯಾದ ನಂತರ, ತಮಿಳುನಾಡು ಮುಕ್ತ ವಿಶ್ವವಿದ್ಯಾಲಯದಲ್ಲಿ ಡಿಗ್ರಿ ಮುಗಿಸಿ ಈಗ ಇತಿಹಾಸ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

ನ. 28ರಂದು ಈ ಹಿರಿಯ ಪದವೀಧರೆ ಸಾಧಕಿಗೆ ರಾಜ್ಯಪಾಲ ಬನ್ವಾರಿಲಾಲ್‌ ಪುರೋಹಿತ್‌ ಅವರು ಪದವಿ ಪ್ರದಾನ ಮಾಡಿದ್ದಾರೆ. ಪದವಿ ನಂತರ ಮಾತನಾಡಿದ ಅವರು, "ನಾನು ಓದುವುದೇ ನನ್ನ ತಂದೆಗೆ ಇಷ್ಟವಿರಲಿಲ್ಲ. ಆದರೂ, ಹೇಗೋ ಎಸ್ಸೆಸ್ಸೆಲ್ಸಿ ಮುಗಿಸಿದೆ.ನಮ್ಮೂರಾದ ಸತ್ತೂರಿನ ಪಿಯು ಕಾಲೇಜಿನಲ್ಲಿ ದಾಖಲಾಗಲು ತಂದಿದ್ದ ಅರ್ಜಿಯನ್ನು ತಂದೆ ಹರಿದುಹಾಕಿ,ಕೆಲವೇ ದಿನಗಳಲ್ಲಿ ಮದುವೆ ಮಾಡಿದರು. ಅಂದು ಕೈಬಿಟ್ಟಿದ್ದ ಕನಸನ್ನು ಇಂದು ಪೂರೈಸಿದ್ದೇನೆ'' ಎಂದಾಗ ನೆರೆದಿದ್ದವರು ಕಣ್ಣಾಲಿಗಳು ತೇವಗೊಂಡವು!

Trending videos

Back to Top