ಲಗೇಜ್ ಜತೆ ಸಾವಿರಾರು ಜಿರಳೆ ತಂದಿದ್ದ ದಂಪತಿ!
Team Udayavani, Dec 3, 2017, 5:11 AM IST
ಚೀನಾದ ಗುವಾಗ್ಡೊಂಗ್ ವಿಮಾನ ನಿಲ್ದಾಣದಲ್ಲಿ ದಂಪತಿಯನ್ನು ನಿಲ್ದಾಣ ಪ್ರವೇಶಿಸದಂತೆ ತಡೆಹಿಡಿದ ಬಗ್ಗೆ ವರದಿಯಾಗಿದೆ. ಏಕೆಂದು ಯೋಚಿಸುತ್ತಿದ್ದೀರಾ? ಅವರ ಲಗೇಜಿನಲ್ಲಿದ್ದದ್ದು ಸಾವಿರಾರು ಜಿರಳೆಗಳು. ಅದೂ ಜೀವಂತ ಜಿರಳೆಗಳು. ನಿಲ್ದಾಣಕ್ಕೆ ಬಂದ ದಂಪತಿಯ ಲಗೇಜ್ ತಪಾಸಣೆ ವೇಳೆ ಅವರ ಬ್ಯಾಗಿನಲ್ಲಿ ಸಾವಿರಾರು ಜಿರಳೆಗಳು ಇರುವುದನ್ನು ನೋಡಿ ಏರ್ಪೋರ್ಟ್ ಸಿಬ್ಬಂದಿ ದಂಗಾಗಿದ್ದಾರೆ! “ರೀ, ಏನ್ರೀ ಇದು’ ಎಂದು ಕೇಳಿದಾಗ, ಉತ್ತರಿಸಿದ ವ್ಯಕ್ತಿ, ತನ್ನ ಪತ್ನಿಗೆ ಇರುವ ಚರ್ಮರೋಗಕ್ಕೆ ಮದ್ದಾಗಿ ಬಳಸಲು ಜಿರಳೆಗಳನ್ನು ಕೊಂಡೊಯ್ಯುತ್ತಿರುವುದಾಗಿ ಹೇಳಿದ್ದಾನೆ.
ಚೀನಾದ ಯಾವುದೋ ಪುರಾತನ ಪದ್ಧತಿಯೊಂದನ್ನು ಉಲ್ಲೇಖೀಸಿದ ಆತ, ಆ ಗಿಡಮೂಡಲಿಕೆಗಳ ಲೇಹಕ್ಕೆ ಈ
ಜಿರಳೆಗಳನ್ನು ಜಜ್ಜಿದ ಪೇಸ್ಟ್ ಮಿಕ್ಸ್ ಮಾಡಿದರೆ ಚರ್ಮರೋಗ ವಾಸಿಯಾಗುತ್ತದೆ ಎಂದಿದ್ದಾನೆ. ಆತನ ಮಾತು ಕೇಳಿ ಸುಸ್ತಾದ ಅಧಿಕಾರಿಗಳು ಜಿರಳೆಗಳೊಂದಿಗೆ ಆ ದಂಪತಿಯನ್ನೂ ವಿಮಾನ ನಿಲ್ದಾಣದಿಂದ ಹೊರಕಳುಹಿಸಿದರಂತೆ!
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ