ಲಗ್ನಪತ್ರಿಕೆಗೂ ಆಧಾರ್‌ ಕಡ್ಡಾಯವಾಯಿತಾ? | Udayavani - ಉದಯವಾಣಿ
   CONNECT WITH US  
echo "sudina logo";

ಲಗ್ನಪತ್ರಿಕೆಗೂ ಆಧಾರ್‌ ಕಡ್ಡಾಯವಾಯಿತಾ?

ಡೆಬಿಟ್‌ ಕಾರ್ಡ್‌, ಮತದಾರರ ಗುರುತಿನ ಚೀಟಿ ಹೋಲುವಂಥ ಮದುವೆ ಆಮಂತ್ರಣ ಪತ್ರಗಳನ್ನು ನೋಡಿದ್ದಾಯಿತು. ಈಗ ಸರದಿ ಆಧಾರ್‌ ಕಾರ್ಡ್‌ ನದ್ದು. ಉತ್ತರ ಪ್ರದೇಶದ ಕಾಟ್ನಿ ಜಿಲ್ಲೆಯ ವೀರೇಂದ್ರ ತಿವಾರಿ ಎಂಬುವರು ತಮ್ಮ ಮಗಳ ಮದುವೆಯ ಆಮಂತ್ರಣ ಪತ್ರಿಕೆಯನ್ನು ಆಧಾರ್‌ ಕಾರ್ಡ್‌ ಹೋಲುವ ರೀತಿ ತಯಾರಿಸಿದ್ದಾರೆ.

ಅವರು ಹೇಳುವಂತೆ ಇದು ಫ್ಯಾನ್ಸಿ ಐಡಿಯಾ ಅಲ್ಲವಂತೆ. ಆಧಾರ್‌ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಅವರು ಹೀಗೆ ಮಾಡಿದ್ದಂತೆ. ನಾನು ಏನೇ ಮಾಡಿದರೂ ಸಮಾಜಕ್ಕೆ ಒಂದು ಸಂದೇಶ ನೀಡುತ್ತೇನೆ ಎಂದು ಅವರು ಹೇಳಿದ್ದಾರೆ. ಇದಲ್ಲದೇ ಇವರ ಹುಟ್ಟುಹಬ್ಬವನ್ನು ಅವರು ವರದಕ್ಷಿಣೆ ವಿರೋಧಿ ದಿನ ಎಂದು ಆಚರಿಸುತ್ತಾರಂತೆ!

Trending videos

Back to Top