CONNECT WITH US  

1 ರೂ. ನಾಣ್ಯ ಅಪನಗದೀಕರಣ ಮಾಡಿದ ಭಿಕ್ಷುಕರು!

ಕೇಂದ್ರ ಸರ್ಕಾರ 500 ಮತ್ತು 1000 ರೂ. ನೋಟುಗಳನ್ನು ಅಪನಗದೀಕರಿಸಿತ್ತು. ಆದರೆ ಈಗ 1 ರೂ. ನಾಣ್ಯ ಅಪನಗದೀಕರಣಗೊಂಡಿದೆ. ಇದಕ್ಕೆ ಕಾರಣ ನಾಣ್ಯದ ಗಾತ್ರ. ಅಪನಗದೀಕರಣ ಎಂದ ಕೂಡಲೆ ಇದು ಯಾವುದಾದರೂ ಸರ್ಕಾರದ ಕೆಲಸ ಎಂದು ತಿಳಿಯಬೇಡಿ. ಈ ಅಪನಗದೀಕರಣದ ಹಿಂದಿರುವುದು ಉತ್ತರ ಪ್ರದೇಶದ ರಾಂಪುರದ ಭಿಕ್ಷುಕರು. ಇಲ್ಲಿಯ ಭಿಕ್ಷುಕರು 1 ರೂ. ನಾಣ್ಯಗಳನ್ನು ಭಿಕ್ಷೆ ಪಡೆಯಬಾರದು ಎಂದು ತೀರ್ಮಾನಿಸಿದ್ದಾರೆ. 1 ರೂ. ನಾಣ್ಯ 50 ಪೈಸೆಯ ನಾಣ್ಯದಷ್ಟು ಚಿಕ್ಕದಿದೆ.

ಇದಕ್ಕಾಗಿ ನಾವಿದನ್ನು ಅಮಾನ್ಯ ಮಾಡುತ್ತಿದ್ದೇವೆ. ಇನ್ನು ಮುಂದೆ ನಮ್ಮಲ್ಲಿ 1 ರೂ. ನಾಣ್ಯಕ್ಕೆ ಬೆಲೆ ಇರುವುದಿಲ್ಲ ಎಂದು ಭಿಕ್ಷುಕ ಶುಕ್ರ ಮಣಿ ಘೋಷಿಸಿದ್ದಾರೆ. ಇದರ ಗಾತ್ರದ ಕಾರಣಕ್ಕಾಗಿ ಆಟೋ ಚಾಲಕರು, ತಳ್ಳುಗಾಡಿಯವರು, ಅಂಗಡಿ ಯವರು ಕೂಡ 1 ರೂ. ನಾಣ್ಯ ಸ್ವೀಕರಿಸುತ್ತಿಲ್ಲ. ಹೀಗಿರುವಾಗ ನೋಟು ಪಡೆಯಲು ಯಾರಿಗೆ ನಾವು 1 ರೂ. ನೀಡುವುದು ಎಂದು ಅವರು ತಮ್ಮ ಸಮಸ್ಯೆ ತೋಡಿಕೊಂಡಿದ್ದಾರೆ.

Trending videos

Back to Top