CONNECT WITH US  
echo "sudina logo";

ಆರ್ಡರ್‌ ಮಾಡಿದ್ದು ಒಂದು; ಕೊಟ್ಟದ್ದು ಮತ್ತೊಂದು

ಈಗಂತೂ ಆನ್‌ಲೈನ್‌ ಶಾಂಪಿಂಗ್‌ ಭಾರಿ ಟ್ರೆಂಡ್‌. ಒಮ್ಮೊಮ್ಮೆ ನಾವು ಆರ್ಡರ್‌ ಮಾಡಿದ ವಸ್ತುವಿನ ಬದಲಿಗೆ ಮತ್ತೂಂದನ್ನು ನೀಡುತ್ತಾರೆ.ಈ ರೀತಿಯ ಅನುಭವ ಆನ್‌ಲೈನ್‌ನಲ್ಲಿ ಶಾಪಿಂಗ್‌ ಮಾಡುವ ಬಹುತೇಕರಿಗೆ ಆಗಿರುತ್ತದೆ. ಬ್ರಿಟನ್‌ನ ವಿದ್ಯಾರ್ಥಿ ಬೆನ್‌ ವಾಸ್ಟನ್‌ ಎಂಬಾತ ಕೂಡ ಈ ರೀತಿ ಬೇಸ್ತು ಬಿದ್ದಿದ್ದಾನೆ. ತಾನು ಕೊಂಡಿದ್ದ ವಸ್ತುವಿಗೆ ಸಂಬಂಧವೇ ಇರದಂಥ ವಸ್ತುವೊಂದು ದೊರಕಿದೆ. ಆತ ಅದನ್ನು ಧರಿಸಿರುವ ಫೋಟೊವನ್ನು ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾನೆ.

ಆತ ಆರ್ಡರ್‌ ಮಾಡಿದ್ದು ಪಿಠೊಪಕರಣಗಳಿಗೆ ಬಳಸುವ ಮರದ ತೆಳು ಹೊದಿಕೆಯನ್ನು. ಆದರೆ ಸಿಕ್ಕಿದ್ದು ದೊಡ್ಡ ಸೈಜಿನ ಹಲ್ಲಿನ ಸೆಟ್ಟು. ಆತ ಅದರ ಫೋಟೊವನ್ನು ಟ್ವಿಟರ್‌ನಲ್ಲಿ ಪೋಸ್ಟ್‌ ಮಾಡಿದ್ದಾನೆ. ಅದನ್ನು ನೋಡಿ ಟ್ವಿಟರಿಗರು ತಮಾಷೆಯ ಕಮೆಂಟ್‌ಗಳನ್ನು ಮಾಡಿದ್ದಾರೆ.

Trending videos

Back to Top