CONNECT WITH US  

ಅಮೆರಿಕದಲ್ಲಿದೆ ಕಲಾಕೃತಿ ರಕ್ಷಿಸುವ ನಾಯಿ ಮರಿ

ಅಮೆರಿಕದ ಬೋಸ್ಟನ್‌ ಫೈನ್‌ ಆರ್ಟ್ಸ್ ಸಂಗ್ರಹಾಲಯ ಕಾವಲಿಗೆಂದು ಮುದ್ದಾದ ವೀಮರಾನರ್‌ ತಳಿಯ ನಾಯಿ ಮರಿಯೊಂದನ್ನು ಕೊಂಡುತಂದಿದೆ. ಅದರ ಹೆಸರು ರಿಲೀ.

ಕಾವಲಿಗಾಗಿ ನಾಯಿ ಸಾಕುವುದು ಸಾಮಾನ್ಯ, ಅದರಲ್ಲೇನು ವಿಶೇಷ ಎನ್ನುತ್ತೀರಾ? ವಿಶೇಷವಿದೆ, ನೀವಂದುಕೊಂಡಂತೆ ನಾಯಿ ಸಾಕುತ್ತಿರುವುದು ಸಂಗ್ರಹಾಲಯವನ್ನು ಕಳ್ಳರಿಂದ ರಕ್ಷಿಸಲು ಅಲ್ಲ. ಬದಲಾಗಿ, ಕ್ರಿಮಿ, ಕೀಟಗಳಿಂದ ರಕ್ಷಿಸಿಕೊಳ್ಳಲಿಕ್ಕಾಗಿಯಂತೆ. ಈ ಪುಟ್ಟ ನಾಯಿ ಸಂಗ್ರಹಾಲಯದಲ್ಲಿರುವ ಕಲಾಕೃತಿಗಳಿಗೆ ತಗಲುವ ಕೀಟಗಳ ಸಂವಾಹ ಮಾಡಲಿದೆಯಂತೆ. ಆ ಮೂಲಕ ಕಲಾಕೃತಿಗಳ ರಕ್ಷಣೆ ಮಾಡಲಿದೆ. ಅದೇಗೆ ಸಾಧ್ಯ ಎನ್ನುತ್ತೀರಾ? ಸಿಂಪಲ್‌, ಕಲಾಕೃತಿಗಳನ್ನು ಜೋರಾಗಿ ಮೂಸುವ ಮೂಲಕ ಇದರ ಮೇಲಿರುವ ಕ್ರಿಮಿ, ಕೀಟಗಳನ್ನು ಓಡಿಸುತ್ತದಂತೆ. ಹೀಗಾಗಿ ಈ ನಾಯಿ ಈಗ ಬೋಸ್ಟನ್‌ ಸಂಗ್ರಹಾಲಯದ ವಿಶೇಷ ಆಕರ್ಷಣೆ.

Trending videos

Back to Top