ಮನೆಯೇ ಸುಟ್ಟರೂ ಸುಡದ ಸೆಲ್ಫಿ ಹುಚ್ಚು!
Team Udayavani, Jan 15, 2018, 11:51 AM IST
ದಕ್ಷಿಣ ಚೀನಾದ ಗುವಾಂಕ್ಸಿ ಝುವಾಂಗ್ ಪ್ರಾಂತ್ಯದಲ್ಲಿ ವಾಸಿಸುತ್ತಿದ್ದ ಝೋಂಗ್ ಚೆಂಗ್ ಎಂಬ ಯುವಕ ಹಾಗೂ ಆತನ ಪ್ರೇಯಸಿ ತಮ್ಮ ಮನೆ ಸುಟ್ಟು ಕರಕಲಾಗಿದ್ದರೂ ಅದರೊಳಗೆ ನಿಂತು ತಣ್ಣಗೆ ನಸುನಗುತ್ತಾ ಕ್ಲಿಕ್ಕಿಸಿಕೊಂಡ ಸೆಲ್ಫಿ ಹಾಗೂ ವಿಡಿಯೋ ತುಣುಕುಗಳು ಅಂತ
ರ್ಜಾಲದಲ್ಲಿ ವೈರಲ್ ಆಗಿವೆ. ಒಂದೇ ವಾರದಲ್ಲಿ ಇವುಗಳನ್ನು ಸುಮಾರು 10 ಕೋಟಿ ಜನ ವೀಕ್ಷಿಸಿದ್ದಾರೆ. ಇವರು ಇತ್ತೀಚೆಗೆ ರಾತ್ರಿ ಮಲಗಿದ್ದ ವೇಳೆ ಬಾತ್ರೂಮ್ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ತಕ್ಷಣವೇ ನೀರು ಚೆಲ್ಲಿ ಬೆಂಕಿ ನಂದಿಸಿದ. ಆದರೂ ಧೃತಿಗೆಡದ ಆತ ಪ್ರೇಯಸಿಯೊಂದಿಗೆ
ಮನೆಯೊಳಗೆ ನಿಂತು ಸೆಲ್ಫಿ, ವಿಡಿಯೋ ಮಾಡಿಕೊಂಡು ಅಂತರ್ಜಾಲಕ್ಕೆ ಹಾಕಿದ್ದ.