ದಿನಕ್ಕೆ 1 ಕೇಜಿ ಮಣ್ಣು ತಿನ್ನುವ 99ರ ಅಜ್ಜ!
Team Udayavani, Jan 20, 2018, 3:52 AM IST
ದೀರ್ಘಾಯುಷ್ಯ ಪಡೆಯಲು ನೈಸರ್ಗಿಕವಾದ ಆಹಾರವನ್ನೇ ತಿನ್ನಿ ಎಂದು ವೈದ್ಯರು ಹೇಳುತ್ತಾರೆ. ಜಾರ್ಖಂಡ್ನ ವ್ಯಕ್ತಿಯೊಬ್ಬರು ಅಪ್ಪಟ ನೈಸರ್ಗಿಕ ವಸ್ತುವನ್ನೇ ತಿನ್ನುತ್ತಿದ್ದಾರೆ. ಆ ನೈಸರ್ಗಿಕ ವಸ್ತು ಬೇರೇನೂ ಅಲ್ಲ, ಮಣ್ಣು! ಈ ವ್ಯಕ್ತಿಯ ಹೆಸರು ಕಾರು ಪಾಸ್ವಾನ್. ಇವರಿಗೀಗ 99 ವರ್ಷ ವಯಸ್ಸು. ಪಾಪ ಇವರು ದೀರ್ಘಾಯುಷ್ಯಕ್ಕಾಗಿ ಮಣ್ಣನ್ನು ತಿನ್ನುವ ಅಭ್ಯಾಸ ಮಾಡಿಕೊಂಡಿದ್ದಲ್ಲ.
ಬಾಲ್ಯದಲ್ಲಿ ತೀವ್ರ ಬಡತನದ ಕಾರಣ ಇವರಿಗೆ ಒಂದು ಹೊತ್ತಿನ ಆಹಾರಕ್ಕೂ ಪರದಾಡುವ ಸ್ಥಿತಿ ಇತ್ತು. ಇವರು 11 ವರ್ಷ ವಯಸ್ಸಿನವರಿದ್ದಾಗ ಬದುಕುಳಿಯುವ ಮಾರ್ಗ ವಾಗಿ ಮೊದಲ ಬಾರಿಗೆ ಮಣ್ಣು ತಿಂದರು. ಬಳಿಕ ಅದೇ ಅವರಿಗೆ ಚಟವಾಗಿ ಪರಿಣಮಿಸಿತು. ಈಗಲೂ ಅವರು ಪ್ರತಿದಿನ ಕನಿಷ್ಠ 1 ಕೆ.ಜಿ. ಮಣ್ಣು ತಿನ್ನುತ್ತಾರಂತೆ. “ನನಗೆ ಮಣ್ಣನ್ನು ತಿನ್ನದೇ ಇರಲು ಸಾಧ್ಯವೇ ಇಲ್ಲ’ ಎನ್ನುತ್ತಾರೆ ಕಾರು. ಆಶ್ಚರ್ಯವೆಂದರೆ ಪ್ರತಿ ದಿನ ಮಣ್ಣು ತಿಂದರೂ ಅವರಿಗೆ ಯಾವತ್ತೂ ಆರೋಗ್ಯ ಕೈಕೊಟ್ಟಿಲ್ಲ. 100 ವರ್ಷಕ್ಕೆ ಕಾಲಿಡಲಿರುವ ಅವರು ಈಗಲೂ ಗಟ್ಟಿಮುಟ್ಟಾಗಿದ್ದಾರೆ.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ