ವಿಮಾನದಲ್ಲಿ ಹೆರಿಗೆ ಮಾಡಿಸಿದ ವೈದ್ಯ ವಿದ್ಯಾರ್ಥಿ
Team Udayavani, Jan 31, 2018, 3:54 AM IST
ಅಮೆರಿಕದ ಕ್ಲೀವ್ಲ್ಯಾಂಡ್ನಲ್ಲಿ 2ನೇ ವರ್ಷದ ಮೂತ್ರ ಶಾಸ್ತ್ರ ವ್ಯಾಸಂಗ ಮಾಡುತ್ತಿರುವ ಭಾರತದ ವೈದ್ಯ ವಿದ್ಯಾರ್ಥಿ ಯಶಸ್ವಿಯಾಗಿ ಹೆರಿಗೆ ಮಾಡಿಸಿದ ಸಂತಸದಲ್ಲಿ ತೇಲುತ್ತಿ ದ್ದಾರೆ. ಅವರು ಹೆರಿಗೆ ಮಾಡಿಸಿದ್ದು ಎಲ್ಲಿ ಎಂಬುದೇ ಮತ್ತೂಂದು ವಿಶೇಷ. ಪ್ಯಾರಿಸ್ನಿಂದ ನ್ಯೂಯಾರ್ಕ್ ತೆರಳುತ್ತಿದ್ದ ಟ್ರಾನ್ಸ್-ಅಟ್ಲಾಂಟಿಕ್ ವಿಮಾನದಲ್ಲಿ ಅವರು ಈ ಹೆರಿಗೆ ಮಾಡಿಸಿದ್ದಾರೆ. ಡಾ. ಸಿಜ್ ಹೇಮಲ್(27) ನವದೆಹಲಿಯಿಂದ ನ್ಯೂಯಾರ್ಕ್ಗೆ ಪ್ರಯಾಣಿಸುತ್ತಿದ್ದರು.ಅವರು ಪ್ಯಾರಿಸ್ನಲ್ಲಿ ವಿಮಾನ ಬದಲಿಸಬೇಕಿತ್ತು. ಟ್ರಾನ್ಸ್-ಅಟ್ಲಾಂಟಿಕ್ ವಿಮಾನವು 35 ಸಾವಿರ ಅಡಿ ಎತ್ತರದಲ್ಲಿ ಸಂಚರಿಸುತ್ತಿದ್ದಾಗ, ಮಹಿಳೆಯೊಬ್ಬರಿಗೆ ಚಿಕಿತ್ಸೆ ನೀಡಲು ಯಾರಾದರೂ ವೈದ್ಯರು ಇದ್ದೀರ ಎಂದು ವಿಮಾನ ಸಿಬ್ಬಂದಿ ಕೇಳಿದಾಗ, ಹೇಮಲ್ ಮಹಿಳೆಗೆ ಕಿಡ್ನಿ ಕಲ್ಲುಗಳಿರಬಹುದು ಎಂದುಕೊಂಡು ಹೋದರಂತೆ.
ಆಕೆಯ ಎದುರು ನಿಂತಾಗಲೇ ತಿಳಿದಿದ್ದು ಮಹಿಳೆ 39 ವಾರಗಳ ಗರ್ಭಿಣಿ ಅಂತ. ಆದರೆ ಧೃತಿಗೆಡದೆ, ಮಕ್ಕಳ ತಜ್ಞರೊಬ್ಬರ ಸಹಾಯ ಪಡೆದು ಆ ಮಹಿಳೆಗೆ ಹೆರಿಗೆ ಮಾಡಿಸಿದ್ದಾರೆ. ಮಹಿಳೆಗೆ ಆರೋಗ್ಯಪೂರ್ಣವಾದ ಗಂಡು ಮಗು ಜನಿಸಿದ್ದು, ಅದಕ್ಕೆ ಜೇಕ್ ಎಂದು ಹೆಸರಿಡಲಾಗಿದೆ.