ಹುಲಿ ಹಿಡಿಯಲು ಹೋಗಿ ಬೇಸ್ತುಬಿದ್ದ ಪೊಲೀಸರು | Udayavani - ಉದಯವಾಣಿ
   CONNECT WITH US  
echo "sudina logo";

ಹುಲಿ ಹಿಡಿಯಲು ಹೋಗಿ ಬೇಸ್ತುಬಿದ್ದ ಪೊಲೀಸರು

ಮನೆ ಬಳಿ ಹುಲಿ ಬಂದು ಮಲಗಿದೆ. ಬೇಗ ಬನ್ನಿ ಎಂದು ವೃದ್ಧನೊಬ್ಬ ಅಪರಾತ್ರಿಯಲ್ಲಿ ಮಾಡಿದ ದೂರವಾಣಿ ಕರೆ ಸ್ಕಾಟ್ಲೆಂಡ್‌ ಪೊಲೀಸರನ್ನು ಬೇಸ್ತುಬೀಳಿಸಿದೆ. ಸಾಮಾನ್ಯವಾಗಿ ಕಾಡುಪ್ರಾಣಿಗಳು ಬಂದಾಗ ಜನರು ಪೊಲೀಸರಿಗೆ ಕರೆ ಮಾಡುವಂತೆಯೇ ಆತನೂ ಕರೆ ಮಾಡಿದ್ದ. ಆದರೆ ವಾಸ್ತವ ಏನೆಂಬುದು ಕರೆ ಮಾಡಿದವನಿಗೂ ಗೊತ್ತಿರಲಿಲ್ಲ. ಪೊಲೀಸರು ಚಿರತೆಯ ವೇಗದಲ್ಲಿ ಬಂದು ನೋಡಿದರು. ಹುಲಿ ತಣ್ಣಗೆ ಮಲಗಿತ್ತು. ಆದರೆ ಅಲುಗಾಡುತ್ತಿರಲಿಲ್ಲ. ಎಲ್ಲಾದರೂ ತಪ್ಪಿಸಿಕೊಂಡೀತು ಎಂದು ಸುತ್ತಲೂ ನೆರೆದರು. ಆ ಮಧ್ಯರಾತ್ರಿಯಲ್ಲಿ ಸುಮಾರು ಮುಕ್ಕಾಲು ಗಂಟೆ ಕಾದಿದ್ದೇ ಬಂತು. ಹುಲಿ ಸ್ವಲ್ಪವೂ ಅಲುಗಾಡಲಿಲ್ಲ. ಮಲಗಿದ್ದಲ್ಲೇ ಇತ್ತು. ಕೊನೆಗೆ ಅನುಮಾನ ಬಂದು ನೋಡಿದರೆ, ಅದು ನಿಜವಾದ ಹುಲಿಯಷ್ಟೇ ದೊಡ್ಡದಾದ ಆಟಿಕೆಯ ಹುಲಿ!

ಪೊಲೀಸರಿಗೆ ಕರೆ ಮಾಡಿದವನಿಗೂ ಇದು ಆಟಿಕೆ ಹುಲಿ ಎಂದು ಗೊತ್ತಿರಲಿಲ್ಲವಂತೆ. ಹೀಗಾಗಿ ಪೊಲೀಸರಿಗೆ ಬೇಸ್ತು ಬಿದ್ದ ಅನುಭವ. ಇದನ್ನೇ ಸ್ಕಾಟ್ಲೆಂಡ್‌ ಪೊಲೀಸರು ಫೇಸ್‌ ಬುಕ್‌ನಲ್ಲಿ ಪ್ರಕಟಿಸಿದ್ದಾರೆ. ಭಾರಿ ಪ್ರತಿಕ್ರಿಯೆಯೂ ವ್ಯಕ್ತವಾಗಿದೆ. ಈ ಘಟನೆಯ ಬಗ್ಗೆ ಜನರು ತರಹೇವಾರಿ ಕಮೆಂಟ್‌ಗಳನ್ನೂ ಮಾಡಿದ್ದಾರೆ.

Trending videos

Back to Top