ಮದ್ಯಾರಾಧನೆ ಹಾಡುಗಳು ಬೇಡವೇ ಬೇಡ ಪ್ಲೀಸ್‌ | Udayavani - ಉದಯವಾಣಿ
   CONNECT WITH US  
echo "sudina logo";

ಮದ್ಯಾರಾಧನೆ ಹಾಡುಗಳು ಬೇಡವೇ ಬೇಡ ಪ್ಲೀಸ್‌

ನಮ್ಮಲ್ಲಿ, "ಮೂರೇ ಮೂರು ಪೆಗ್ಗಿಗೆ ತಲೆ ಗಿರಗಿರ ಅಂದಿದೆ...', "ಖಾಲಿ ಕ್ವಾಟ್ರಾ ಬಾಟ್ಲು ಹಂಗೆ ಲೈಫ‌ು....' ಮುಂತಾದ ಸಿನಿಮಾ ಹಾಡುಗಳು ಸಿಕ್ಕಾಪಟ್ಟೆ ಫೇಮಸ್‌ ಆಗಿ ಯುವಜನರ ಮನಸೂರೆಗೊಂಡಿವುದು ಗೊತ್ತಿರುವ ವಿಚಾರ. ಹರ್ಯಾಣದಲ್ಲಿ ಇಂಥ ಹಾಡುಗಳ ಅಬ್ಬರ ತುಸು ಜೋರಾಗೇ ಇದೆ. ಇಂಥ ಹಾಡುಗಳಿಂದ ನಿಜಕ್ಕೂ ಭೀತಿಗೊಳಗಾಗಿರುವುದು ಅಲ್ಲಿನ ಬುದ್ಧಿಜೀವಿಗಳಲ್ಲ, ಪೊಲೀಸರು! ಹೌದು.

ಮೊದಲೇ ಡ್ರಗ್ಸ್‌ಗೆ ಕುಖ್ಯಾತಿ ಪಡೆದಿರುವ ಹರ್ಯಾಣದಲ್ಲಿ ಯದ್ವತದ್ವಾ ಹುಟ್ಟಿಕೊಳ್ಳುತ್ತಿರುವ ಇಂಥ ಹಾಡುಗಳು, ಎಳೆಯ ವಯಸ್ಸಿನ ಹುಡುಗರ ಮೇಲೆ ಕೆಟ್ಟ ಪರಿಣಾಮ ಬೀರಬಹುದು ಎಂದು ಮನಗಂಡಿರುವ ಪೊಲೀಸರು, ಇದೀಗ ಅಲ್ಲಿನ ಪ್ರತಿಯೊಬ್ಬ ಸಂಗೀತ ನಿರ್ದೇಶಕನ ಮನೆಗೆ ಭೇಟಿ ನೀಡಿ, ಮದ್ಯ, ಮಾದಕ ವಸ್ತು ಹಾಗೂ ಹಿಂಸೆಯನ್ನು ಪ್ರಚೋದಿಸುವ ಹಾಡುಗಳನ್ನು ತಯಾರಿಸಬಾರದೆಂದು ಮನವಿ ಮಾಡಲಾರಂಭಿಸಿದ್ದಾರೆ. ಅಷ್ಟೇ ಅಲ್ಲ, ಶಸ್ತ್ರಾಸ್ತ್ರಗಳು, ಗ್ಯಾಂಗ್‌ ಸ್ಟರ್‌ಗಳ ಹೆಸರುಗಳನ್ನೂ ಬಳಸದಿರುವಂತೆ ಕೋರಿದ್ದಾರೆ. ಈಗ, ಆ ಸಂಗೀತ ನಿರ್ದೇಶಕರು ತಮ್ಮ ಸಾಮಾಜಿಕ ಕಾಳಜಿ ತೋರಬೇಕಿದೆ.
 

Trending videos

Back to Top