ಸ್ಟುಡಿಯೋದಲ್ಲಿ ಕೂತು ಜಗಳವಾಡಿದ ಆ್ಯಂಕರ್ಗಳು
Team Udayavani, Feb 27, 2018, 4:10 AM IST
ನ್ಯೂಸ್ ಆ್ಯಂಕರ್ಗಳ ತೆರೆಮರೆಯ ಅವಾಂತರಗಳ ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ. ಈಗ ವೈರಲ್ ಆಗುವ ಸರದಿ ಪಾಕಿಸ್ತಾನಿ ಸುದ್ದಿ ಚಾನೆಲ್ನ ಇಬ್ಬರು ಆ್ಯಂಕರ್ಗಳ ತೆರೆ ಮರೆಯ ಜಗಳದ್ದು. ಪಾಕ್ನ ಸಿಟಿ 42 ಎಂಬ ಸುದ್ದಿ ವಾಹಿನಿಯ ಮಹಿಳೆ ಮತ್ತು ಪುರುಷ ಆ್ಯಂಕರ್ಗಳಿಬ್ಬರು ಸ್ಟುಡಿಯೊದಲ್ಲಿ ಕುಳಿತು ಸುದ್ದಿ ಮುಖ್ಯಸ್ಥಗೆ ಪರಸ್ಪರ ದೂರುವುದು ಕ್ಯಾಮರಾದಲ್ಲಿ ಸೆರೆಯಗಿದೆ. ಈಕೆ ನನ್ನೊಡನೆ ಮಾತನಾಡ ಬೇಡ ಎನ್ನುತ್ತಾಳೆ. ಇವಳ ಜೊತೆ ಹೇಗೆ ಸುದ್ದಿ ನಿರೂಪಿಸುವುದು ಎಂದು ಆತ ಪ್ರೊಡ್ಯೂಸರ್ಗೆ ಹೇಳುತ್ತಾನೆ. ಆಕೆ, ನಾನು ಹೇಳಿದ್ದು ನೀನು ಬಳಸಿದ ಭಾಷೆ ಕುರಿತು. ನೀನು ನನ್ನನ್ನು ಅವಮಾನಿಸಿದೆ ಎನ್ನುತ್ತಾಳೆ. ಈ ಜಗಳ 2-3 ನಿಮಿಷಗಳಿಗೆ ಮುಂದುವರೆಯುತ್ತದೆ.