CONNECT WITH US  

ಒಂದು ಮೊಟ್ಟೆಯೊಳಗೆ ಮತ್ತೊಂದು ಮರಿ ಮೊಟ್ಟೆ 

ಒಂದು ಮೊಟ್ಟೆ ಹೆಚ್ಚೆಂದರೆ ಮುಷ್ಟಿಯಲ್ಲಿ ಹಿಡಿಯುವಷ್ಟು ದೊಡ್ಡದಿರುತ್ತದೆ. ಆದರೆ ಆಸ್ಟ್ರೇಲಿಯಾದ ಮೊಟ್ಟೆ ಅಂಗಡಿ ಮಾಲೀಕರೊಬ್ಬರಿಗೆ ಸಾಮಾನ್ಯ ಮೊಟ್ಟೆಯಿಂದ ಮೂರು ಪಟ್ಟು ದೊಡ್ಡದಾಗಿರುವ ಕೋಳಿ ಮೊಟ್ಟೆ ಸಿಕ್ಕಿದೆ. ಅದು 176 ಗ್ರಾಂ ಇದೆ. ಸಾಮಾನ್ಯ ಕೋಳಿ ಮೊಟ್ಟೆ 58 ಗ್ರಾಂ ಇರುತ್ತದೆ. ಇನ್ನೂ ಆಶ್ಚರ್ಯ ವೆಂದರೆ  ಅದನ್ನು ಒಡೆದಾಗ ಒಳಗೆ ಮತ್ತೂಂದು ಮೊಟ್ಟೆಯಿರುವುದು ಪತ್ತೆಯಾಗಿದೆ. ಅದನ್ನು ನೋಡಿ ನನಗೆ ನಿಜಕ್ಕೂ ಸೋಜಿಗವಾಯಿತು. ಮೊಟ್ಟೆಯ ಆಕಾರ ನೋಡಿ ಒಳಗೆ ನಾಲ್ಕು ಹಳದಿ ಭಾಗ ಇರಬಹುದು ಎಂದು ಅಂದಾಜಿಸಿದ್ದೆವು. ಆದರೆ ಇದರೊಳಗೆ ಮತ್ತೊಂದು ಮೊಟ್ಟೆ ಇದ್ದದ್ದು ನೋಡಿ ಚಕಿತರಾದೆವು ಎಂದು ಮಾಲೀಕರು ಹೇಳಿದ್ದಾರೆ.  

Back to Top