CONNECT WITH US  
echo "sudina logo";

ಸಂಬಳ ಜಾಸ್ತಿ ಮಾಡಿದ್ದಕ್ಕೆ ವೈದ್ಯರ ಮುಷ್ಕರ!

ಇತ್ತ, ಭಾರತೀಯ ಉದ್ಯೋಗಿಗಳು "ಯಾರಿಗೆ ಸಾಲುತ್ತೆ ಸಂಬಳ' ಅಂತ ದಿನನಿತ್ಯ ಗೋಳಾಡುತ್ತಿದ್ದರೆ, ದೂರದ ಕೆನಡಾದಲ್ಲಿ ಸುಮಾರು 500ರಷ್ಟು ವೈದ್ಯರು ತಮಗೆ ನೀಡುತ್ತಿರುವ ಸಂಬಳ ಜಾಸ್ತಿ ಆಗಿದೆ. ಪ್ಲೀಸ್‌ ಅದನ್ನು ಕಮ್ಮಿ ಮಾಡಿ ಅಂತ ಮುಷ್ಕರಕ್ಕಿಳಿದಿದ್ದಾರೆ! ಇತ್ತೀಚೆಗೆ, ಕೆನಡಾ ವೈದ್ಯಕೀಯ ಸಂಸ್ಥೆಗಳ ಒಕ್ಕೂಟವು ವೈದ್ಯರ ವೇತನವನ್ನು ಹೆಚ್ಚಿಸಿದ್ದು ಇವರಿಗೆ ಅಸಮಾಧಾನ ತಂದಿದೆಯಂತೆ. ಇವರಿಗೇನು ತಲೆ ಕೆಟ್ಟಿದೆಯಾ ಅಂತ ಯೋಚಿಸಬೇಡಿ. ಇವರು ಈ ಮುಷ್ಕರ ಮಾಡುತ್ತಿರುವುದು ಒಂದು ಸಾಮಾಜಿಕ ಕಳಕಳಿಗಾಗಿ.

ಈ ವೈದ್ಯರು ಸೇವೆ ಸಲ್ಲಿಸುತ್ತಿರುವ ಆಸ್ಪತ್ರೆಗಳಲ್ಲಿ ಶುಶ್ರೂಷಕಿಯರಿಗೆ ಬಹಳ ಕಡಿಮೆ ಸಂಬಳ ಇದೆಯಂತೆ.ಅಲ್ಲದೆ, ಕೆಲವು ಆಸ್ಪತ್ರೆಗಳನ್ನು ಮೂಲಸೌಕರ್ಯಗಳ ಕೊರತೆಯೂ ಕಾಡುತ್ತಿದೆಯಂತೆ. ಕಳಪೆ ಸೌಲಭ್ಯಗಳಿಂದಾಗಿ ಇಲ್ಲಿಗೆ ಬರುವ ರೋಗಿಗಳು ಕಷ್ಟ ಅನುಭವಿಸುವಂತಾಗಿದೆಯಂತೆ. ಹಾಗಾಗಿ, ಅವರ ಸ್ಥಿತಿಗತಿಗಳು ಉತ್ತಮಗೊಳ್ಳುವುದಕ್ಕೆ ಮೊದಲು ಆದ್ಯತೆ ಕೊಡಿ. ನಮಗೆ ಸಂಬಳ ಹೆಚ್ಚು ಬೇಕಿಲ್ಲ ಅಂತ ವೈದ್ಯರು ಸರ್ಕಾರದ ಮುಂದೆ ಬೇಡಿಕೆಯಿಟ್ಟಿದ್ದಾರೆ.

Trending videos

Back to Top