CONNECT WITH US  
echo "sudina logo";

ಮಗುವಿನ ಹೆಸರು ಬದಲಿಸಲು ನೋಟಿಸ್‌

ಮಕ್ಕಳಿಗೆ ಹೆಸರಿಡುವಾಗ ಪೋಷಕರು ಅಷ್ಟಿಷ್ಟು ತಲೆಕೆಡಿಸಿಕೊಳ್ಳುವುದಿಲ್ಲ. ಕೆಲ ಸಂಸಾರಗಳಲ್ಲಿ ಮಗುವಿಗೆ ಹೆಸರಿಡುವ ಕಾರಣಕ್ಕೇ ಗಂಡ ಹೆಂಡತಿ ನಡುವೆ ಜಗಳಗಳೂ ನಡೆಯುತ್ತವೆ. ಎಷ್ಟೋ ಬಾರಿ ಯೋಚಿಸಿ ಮಗುವಿಗೆ ಹೆಸರಿಟ್ಟ ಬಳಿಕ, ಸರ್ಕಾರ ಆ ಹೆಸರನ್ನು ರದ್ದುಗೊಳಿಸಿದರೆ ಪಾಪ ಪೋಷಕರಿಗೆ ಎಷ್ಟು ಬೇಸರವಾಗಬಹುದು.

ಈ ರೀತಿಯ ಘಟನೆ ಫ್ರಾನ್ಸ್‌ನಲ್ಲಿ ನಡೆದಿದೆ. ದಂಪತಿಯೊಂದು ತಮ್ಮ ಹೆಣ್ಣು ಮಗುವಿಗೆ "ಲಿಯಾಮ್‌' ಎಂಬ ತುಸು ವಿಚಿತ್ರವಾದ ಹೆಸರಿಟ್ಟಿತ್ತು. ಇದು ಹುಡುಗರಿಗೆ ಇಡಬಹುದಾದ ಸಾಂಪ್ರದಾಯಿಕ ಹೆಸರು. ಇದು ಲಿಂಗದ ವಿಚಾರವಾಗಿ ಗೊಂದಲ ಮೂಡಿಸಬಹುದು. ಅದಕ್ಕಾಗಿ ಮಗುವಿಗೆ ಬೇರೆ ಹೆಸರಿಡಬೇಕು ಎಂದು ಸರ್ಕಾರ ಕೋರ್ಟ್‌ ಮೂಲಕ ನೋಟಿಸ್‌ ಹೊರಡಿಸಿತು. ಮಗುವಿಗೆ ಆದಷ್ಟು ಬೇಗ ಬೇರೆ ಹೆಸರಿಡದಿದ್ದರೆ ಕೋರ್ಟ್‌ ತಾನೇ ಹೆಸರಿಡುವುದಾಗಿ ಹೇಳಿದೆ. ಪೋಷಕರು ಈಗ ಮಗುವಿನ ಹೆಸರು ಉಳಿಸಿಕೊಳ್ಳಲು ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ. ಫ್ರಾನ್ಸ್‌ ಮಕ್ಕಳ ಹೆಸರಿನ ವಿಚಾರವಾಗಿ ಬಹಳ ಕಟ್ಟುನಿಟ್ಟು. ಈ ರೀತಿಯ ಕೋರ್ಟ್‌ ನೋಟಿಸ್‌ಗಳು ಇಲ್ಲಿ ಅಸಹಜವಲ್ಲ.

Trending videos

Back to Top