2 ವರ್ಷ ಬಳಿಕ ಕಡಲಲ್ಲಿ ಇದ್ದ ಕ್ಯಾಮೆರಾ ಪತ್ತೆ
Team Udayavani, Apr 2, 2018, 4:51 AM IST
ಇದು ಒಂದು ಮುತ್ತಿನ ಕಥೆಯಲ್ಲ, ಸಮುದ್ರದಲ್ಲಿ ಸಿಕ್ಕ ಕ್ಯಾಮೆರಾದ ಕಥೆ. ತೈವಾನ್ನ ಬೀಚ್ನಲ್ಲಿ ಶಾಲಾ ಮಕ್ಕಳು ಶ್ರಮದಾನಕ್ಕೆ ಬಂದಿದ್ದಾಗ ಅವರಿಗೆ ವಸ್ತುವೊಂದು ಸಿಕ್ಕಿತ್ತು. ಕೆಸರು, ಕೊಳಕು ಮೆತ್ತಿಕೊಂಡಿದ್ದ ಆ ವಸ್ತು ಏನಿರಬಹುದು ಎಂಬ ಕುತೂಹಲದಿಂದ, ಕವರ್ ತೆಗೆದು ನೋಡಿದರೆ ಅಚ್ಚರಿ ಕಾದಿತ್ತು. ಒಳಗೆ ಇದ್ದಿದ್ದು ಕ್ಯಾಮೆರಾ. ಅದನ್ನು ಪಡೆದುಕೊಂಡ ಶಿಕ್ಷಕಿ ಕ್ಯಾಮೆರಾ ಆನ್ ಮಾಡಿ ನೋಡಿದರೆ, ಆನ್ ಆಯಿತು ಮಾತ್ರವಲ್ಲ, ಬ್ಯಾಟರಿಯಲ್ಲಿ ಚಾರ್ಜ್ ಕೂಡ ಇತ್ತು. ಒಳಗಿದ್ದ ಫೋಟೋಗಳಿಗೂ ಏನೂ ಆಗಿರಲಿಲ್ಲ. ತಕ್ಷಣ ಶಿಕ್ಷಕಿ, ಅದರಲ್ಲಿದ್ದ ಯುವತಿಯ ಫೋಟೋವನ್ನು ಫೇಸ್ಬುಕ್ನಲ್ಲಿ ಅಪ್ಲೋಡ್ ಮಾಡಿದರು. 48 ಗಂಟೆಗಳ ಬಳಿಕ ಕ್ಯಾಮೆರಾದ ಮಾಲೀಕರು ಪತ್ತೆಯಾದರು. 2 ವರ್ಷಗಳ ಹಿಂದೆ ಕಳೆದುಹೋಗಿದ್ದ ಕ್ಯಾಮೆರಾ ಅದಾಗಿತ್ತು. ಟೋಕಿಯೋದ ಯುವತಿ ಸ್ಕೂಬಾ ಡೈವಿಂಗ್ ಮಾಡುವಾಗ ಕ್ಯಾಮೆರಾ ಕಳೆದುಹೋಗಿತ್ತು. ಇಶಿಗಾಕಿಯಲ್ಲಿ ಕಳೆದುಹೋಗಿದ್ದ ಕ್ಯಾಮೆರಾ 155 ಮೈಲು ದೂರದ ತೈವಾನ್ನಲ್ಲಿ ಸಿಕ್ಕಿದ್ದು ವಿಶೇಷ.