ಗಾಂಜಾ ಗಿಡವನ್ನು ಕಮೋಡ್ಗೆ ಹಾಕಬೇಡಿ
Team Udayavani, Apr 14, 2018, 3:47 AM IST
ಮನೆಯಂಗಳದಲ್ಲಿ ಗಾಂಜಾ ಬೆಳೆಸಿ, ಇನ್ನೇನು ಪೊಲೀಸರು ಬಂದು ಪರಿಶೀಲಿಸುತ್ತಾರೆ ಎಂಬ ಸಮಯಕ್ಕೆ ಅವುಗಳನ್ನು ಕತ್ತರಿಸಿ ಮನೆಯ ಕಮೋಡ್ನಲ್ಲಿ ಅದನ್ನು ತೊಳೆದು ಹಾಕಲು ಪ್ರಯತ್ನಿಸಬೇಡಿ. ಈ ಎಚ್ಚರಿಕೆಯನ್ನು ಇಂಗ್ಲೆಂಡ್ನ ಪೊಲೀಸರೇ ನೀಡಿದ್ದಾರೆ. ಗಾಂಜಾ ಗಿಡ ಕಮೋಡ್ನಲ್ಲಿ ನೀರಿನ ಜೊತೆ ಹೋಗುವುದಿಲ್ಲ ಹೀಗಾಗಿ ಇಂಥ ವ್ಯರ್ಥ ಪ್ರಯತ್ನಕ್ಕೆ ಕೈ ಹಾಕಬೇಡಿ ಎಂದಿದ್ದಾರೆ. ಜೊತೆಗೆ, ಅವರು ಮನೆಯೊಂದರ ಮೇಲೆ ದಾಳಿ ಮಾಡಿದಾಗ, ಆ ಮನೆಯವರು ಕಮೋಡಿಗೆ ಗಿಡವನ್ನು ಕತ್ತರಿಸಿ ಹಾಕಿ ಫ್ಲಶ್ ಮಾಡಿದ್ದಾಗಿಯೂ, ಅದು ಕಮೋಡ್ನಲ್ಲೇ ಉಳಿದಿದ್ದ ಫೋಟೊವೊಂದನ್ನು ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಬಾತ್ಟಬ್ನಲ್ಲಿ ಇರಿಸಿದ್ದ ಗಾಂಜಾ ಸಸಿಗಳ ಫೋಟೊ ಹಾಕಿ ನಾವು ಮನೆಯ ಎಲ್ಲಾ ಮೂಲೆಗಳನ್ನೂ ಪರಿಶೀಲಿಸುತ್ತೇವೆ ಎಂಬ ಎಚ್ಚರಿಕೆ ಸಂದೇಶವನ್ನೂ ಕಳುಹಿಸಿದ್ದಾರೆ