CONNECT WITH US  

ಕದ್ದ ಹಣವನ್ನು ಗಾಳಿ ಬಯಲಿಗೆಳೆದಿತ್ತು...

ಪ್ರಕೃತಿ ಕೆಲವೊಮ್ಮೆ ಗುರುವಾಗಿ, ತಾಯಿಯಾಗಿ ಪಾಠ ಕಲಿಸುತ್ತದೆ ಎಂಬ ಮಾತುಗಳಿವೆ. ಬ್ರಿಟನ್‌ನ ಗ್ರೇಟರ್‌ ಮ್ಯಾಂಚೆಸ್ಟರ್‌ನಲ್ಲಿ ಪ್ರಕೃತಿ ಪೊಲೀಸ್‌ ಆಗಿ ಕಳ್ಳರನ್ನು ಹಿಡಿದಿದೆ. ಇಬ್ಬರು ದರೋಡೆಕೋರರು ಬ್ಯಾಂಕನ್ನು ಲೂಟಿ ಮಾಡಿ ಹಣವನ್ನು ಪ್ಯಾಂಟ್‌ ಒಳಗೆ ತುರುಕಿ ಹೊರ ಓಡುತ್ತಿದ್ದರು. ಆದರೆ ಜೋರಾಗಿ ಬೀಸಿ  ಬಂದ ಗಾಳಿ ಅವರು ಹಣವನ್ನು ಕದ್ದೊಯ್ಯಲು ಬಿಡಲಿಲ್ಲ. ಆ ಗಾಳಿಯ ರಭಸಕ್ಕೆ ಪ್ಯಾಂಟಿನಲ್ಲಿ ತುರುಕಿದ್ದ ನೋಟುಗಳು ಹಾರಲು ಶುರುಮಾಡಿದವು. ಕಕ್ಕಾಬಿಕ್ಕಿಯಾಗುವ ದರೋಡೆಕೋರರು ರಸ್ತೆಯಲ್ಲಿ ಅತ್ತಿಂದಿತ್ತ ಓಡಾಡುತ್ತಾ ಅವುಗಳನ್ನು ಬಾಚಿಕೊಳ್ಳಲು ಹರಸಾಹಸ ಪಡುತ್ತಾನೆ. ಆದರೆ ಗಾಳಿ ಆತನಿಗೆ ಹಣವನ್ನು ಆರಿಸಿಕೊಳ್ಳಲೂ ಬಿಡುವುದಿಲ್ಲ. ಈ ವಿಡಿಯೋವನ್ನು ಗ್ರೇಟರ್‌ ಮ್ಯಾಂಚೆಸ್ಟ್‌ರ್‌ನ ಪೊಲೀಸರು ಜಾಲತಾಣಗಳಲ್ಲಿ ಪ್ರಕಟಿಸಿದ್ದಾರೆ. ಈಗ ಇದು ಫ‌ುಲ್‌ ವೈರಲ್‌.

Trending videos

Back to Top