CONNECT WITH US  

ನಾಯಿಗಾಗಿ ಕೋರ್ಟ್‌ ಮೆಟ್ಟಿಲೇರಿದರು!

ಭೂಮಿಗಾಗಿ ಅಕ್ಕಪಕ್ಕದ ಮನೆಯವರು ಕಚ್ಚಾಡುವಂತೆ ಅಮೆರಿಕದ ಫ್ಲೋರಿಡಾದ ನೆರೆಹೊರೆಯವರು ನಾಯಿಗಾಗಿ ಕಚ್ಚಾಡಿದ್ದಾರೆ. ಈ ಕಚ್ಚಾಟ ಕೋರ್ಟ್‌ ಮೆಟ್ಟಿಲೇರಿದೆ.

ಎಲಾರಿಯೊ ಎಂಬ ಹೆಸರಿನ 4 ವರ್ಷ ವಯಸ್ಸಿನ ಕಪ್ಪು ಲ್ಯಾಬ್ರಡಾರ್‌ ನಾಯಿಯನ್ನು ಟೀನಾ ವಾಕರ್‌ 2016ರಲ್ಲಿ ದತ್ತು ತೆಗೆದುಕೊಂಡು ಸಾಕಿದ್ದರು. ಅವರು ಕೆಫೆ ಒಂದರಲ್ಲಿ ಕೆಲಸ ಮಾಡುತ್ತಿದ್ದ ಕಾರಣ ಪಕ್ಕದ ಮನೆಯಾತ ಡೇವಿಡ್‌ ಸೋಮರ್‌ವೈಲ್‌ನಲ್ಲಿ ನಾಯಿಯನ್ನು ಬಿಟ್ಟು ಹೋಗುತ್ತಿದ್ದರು. ಟೀನಾ ಹೇಳುವಂತೆ, ಮೊದಲು ಎಲ್ಲವೂ ಸರಿ ಇತ್ತು.ಆದರೆ ಕಳೆದ ವರ್ಷ ಅವರು ದೀರ್ಘ‌ ಅವಧಿಯ ಪ್ರವಾಸ ಹೋಗಬೇಕಾಗಿ ಬಂದಾಗ, ನಾಯಿಯ ಮೈಕ್ರೋಚಿಪ್‌ನಲ್ಲಿ ಡೇವಿಡ್‌ ತನ್ನ ಹೆಸರು ಸೇರಿಸಿ, ತಾನೇ ಅದರ ಮಾಲೀಕನಾಗಲು ಪ್ರಯತ್ನಿಸಿದ. ಈ ಕಾರಣ ಆಕೆ ಪೊಲೀಸರಿಗೆ ದೂರು ನೀಡಿದರು. ನಾನು ಟೀನಾಗಿಂತಲೂ ಆರ್ಥಿಕವಾಗಿ ಸದೃಢವಾಗಿದ್ದೇನೆ. ನಾಯಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದು ಡೇವಿಡ್‌ ಕೋರ್ಟ್‌ನಲ್ಲಿ ಹೇಳಿದ್ದಾರೆ. ನಾಯಿ ಕಡೆಗೆ ಇಬ್ಬರಿಗೂ ಇರುವ ವಾತ್ಸಲ್ಯ ಕಂಡ ಜಡ್ಜ್, ಬೇರ್ಪಟ್ಟ ಪೋಷಕರು ಮಕ್ಕಳ ಜವಾಬ್ದಾರಿ ಹಂಚುವಂತೆ ಇಬ್ಬರಿಗೂ ದಿನಗಳ ಲೆಕ್ಕದಲ್ಲಿ ನಾಯಿಯ ಪಾಲನೆಯನ್ನು ಹಂಚಿದ್ದಾರೆ.

Back to Top