2.12 ಕೋಟಿ ಬ್ರೇಕಪ್ ಫೀ ಎಸೆದು ಹೋದ ಚೀನಿ ಮಹಿಳೆ!!
Team Udayavani, May 13, 2018, 5:07 AM IST
ಚೀನಾದ ಮಹಿಳೆಯೊಬ್ಬಳು ಹಣದ ಕುರಿತು ತೋರಿರುವಷ್ಟು ಉಡಾಫೆಯನ್ನು ಬಹುಶಃ ಯಾವ ಮಹಿಳೆಯೂ ತೋರಿರಲಾರರು. ಬರೋಬ್ಬರಿ 2.12 ಕೋಟಿ ರೂ. ಮೌಲ್ಯದ ನೋಟುಗಳಿರುವ ಸೂಟ್ಕೇಸನ್ನು ಈಕೆ ಕಾಲ್ಕಸದಂತೆ ಕಂಡು, ಬಾರ್ವೊಂದರ ಹಿಂದೆ ಬಿಸಾಕಿ ಹೋಗಿದ್ದಳು.
ಬಾರ್ನ ನೌಕರರ ಕೈಗೆ ಈ ಸೂಟ್ಕೇಸು ಸಿಕ್ಕಿದ್ದು, ಅವರುಅದನ್ನು ಪೊಲೀಸರ ವಶಕ್ಕೆ ಕೊಟ್ಟಾಗಲೇ ತಿಳಿದಿದ್ದು ಅಸಲಿ ಕಥೆ.
ಈ ಮೊತ್ತವು ವ್ಯಕ್ತಿಯೊಬ್ಬ ತನ್ನ ಪ್ರಿಯತಮೆಯೊಂದಿಗೆ ಸಂಬಂಧ ಕಡಿದುಕೊಂಡಿದ್ದಕ್ಕಾಗಿ ಆಕೆಗೆ ನೀಡಿದ್ದ “ಬ್ರೇಕಪ್ ಫೀ ‘. ನನ್ನ ನಿನ್ನ ಸಂಬಂಧ ಇಲ್ಲಿಗೆ ಮುಗಿಯಿತು ಎಂದು ಈ 2.12 ಕೋಟಿ. ರೂಗಳನ್ನು ಆಕ ಆಕೆಗೆ ನೀಡಿದ್ದ. ಆದರೆ ಆಕೆ, “ಇದು ತೀರಾ ಕಡಿಮೆಯಾಯಿತು. ಇಷ್ಟು ಹಣ ನನಗೆ ಬೇಡ,
ಇನ್ನಷ್ಟು ಹಣ ಕೊಟ್ಟರಷ್ಟೇ ತೆಗೆದುಕೊಳ್ಳುತ್ತೇನೆ ಎಂದು ಹೇಳಿ, ಸಿಟ್ಟಿನಿಂದ ಈ ಹಣವನ್ನು ಬಾರ್ ಹಿಂಬದಿಯಲ್ಲಿ ಎಸೆದು ಹೋಗಿದ್ದಳಂತೆ’. ಚೀನಾದಲ್ಲಿ ಪ್ರೇಮ ಸಂಬಂಧಗಳು ಮುರಿ ದರೆ ಅದಕ್ಕೆ ಮಾಜಿ ಸಂಗಾತಿಗೆ ಪರಿಹಾರ ಧನ ನೀಡಬೇಕು. ಆ ಮಹಿಳೆ 10.61 ಕೋಟಿ ರೂ. ಕೇಳಿದ್ದಳಂತೆ. ಅದನ್ನು
ಕೊಡಲಾರದ ಯುವಕ ಕೇವಲ 2.12 ಕೋಟಿ ಕೊಟ್ಟು ಕೈತೊಳೆದುಕೊಳ್ಳಲು ಮುಂದಾಗಿದ್ದೇ ಈ ರಾದ್ದಾಂತಕ್ಕೆ ಕಾರಣ.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ