ಬಟ್ಟೆ ಸರಿಯಿಲ್ಲ ಎಂದಿದ್ದಕ್ಕೆ ಅದನ್ನೇ ಕಿತ್ತೆಸೆದಳು! | Udayavani - ಉದಯವಾಣಿ
   CONNECT WITH US  
echo "sudina logo";

ಬಟ್ಟೆ ಸರಿಯಿಲ್ಲ ಎಂದಿದ್ದಕ್ಕೆ ಅದನ್ನೇ ಕಿತ್ತೆಸೆದಳು!

"ನೀನು ಹಾಕ್ಕೊಂಡಿರೋ ಬಟ್ಟೆ ಸರಿಯಿಲ್ಲ ಕಣಮ್ಮಾ... ಸರಿಯಾಗಿ ಬಟ್ಟೆ ಉಟ್ಟುಕೋ' ಅಂತ ಈ ಹುಡು ಗಿಗೆ ಆ ಮಹಿಳಾ ಪ್ರೊಫೆಸರ್‌ ಬುದ್ಧಿವಾದ ಹೇಳಿದ್ದೇ ತಪ್ಪಾ ಗೋಯ್ತು ನೋಡಿ. ಶನಿ ವಾರ, ಅದೇ ಪ್ರೊಫೆ ಸರ್‌ ಮುಂದೆ ತರಗತಿಯ ವೇದಿಕೆ ಮೇಲೆ ವಿಷ ಯ ವೊಂದರ ಪ್ರಸೆಂಟೇಷನ್‌ ನೀಡುವಾಗ ಇದ್ದಕ್ಕಿದ್ದಂತೆ ತನ್ನೆಲ್ಲ ಬಟ್ಟೆ ಕಳಚಿ ಒಳ ಉಡುಪಿನಲ್ಲಿ ನಿಂತು ಬಿಟ್ಟಿದ್ದಾಳೆ ಈ ಮಾರಾಯ್ತಿ!

ಈ ಘಟನೆ ನಡೆ ದಿ ರೋದು ನ್ಯೂಯಾ ರ್ಕ್‌ನ ಕಾರ್ಮೆಲ್‌ ವಿಶ್ವ ವಿದ್ಯಾಲಯದಲ್ಲಿ. ವಿವ ಸ್ತ್ರಳಾದ ಆ ಪುಣ್ಯಾ ತಗಿತ್ತಿಯ ಹೆಸರು ಲೆಟಿ ಟಿಯಾ ಚಾಯ್‌. ಇತ್ತೀಚೆಗೆ, ಈ ಚಾಯ್‌, ಅರೆ ಬರೆ ಬಟ್ಟೆ ಹಾಕ್ಕೊಂಡು ಕಾಲೇಜಿಗೆ ಬಂದಿದ್ದಳು. ಅದನ್ನು ಗಮ ನಿ ಸಿದ ಆಕೆಯ ಪ್ರೊಫೆ ಸರ್‌ ರೆಬೆಕಾ ಮ್ಯಾಗರ್‌, ಹತ್ತಿರ ಕರೆದು, ನೀನು ಹಿಂಗೆಲ್ಲ ಬಂದರೆ ಇತರ ವಿದ್ಯಾ ರ್ಥಿ ಗಳ ಗಮನ ಪಾಠದಿಂದ ನಿನ್ನ ಬಟ್ಟೆಯ ಮೇಲೆ ಹೋಗುತ್ತೆ. ಇನ್ನು ಮುಂದೆ ಇಂಥ ವಸ್ತ್ರಗಳನ್ನು ತೊಟ್ಟು ಬರಬೇಡ ಎಂದು ಹೇಳಿ ದ್ದಾರೆ. ಅವರ ದೃಷ್ಟಿಕೋನವನ್ನು ಪ್ರತಿಭಟಿಸುವ ಉದ್ದೇಶದಿಂದಲೇ ಸಾಮಾನ್ಯ ವಿದ್ಯಾರ್ಥಿನಿಯಾಗಿದ್ದ ಚಾಯ್‌, ಏಕಾ ಏಕಿ "ಗರಂ' ಚಾಯ್‌ ಆಗಿದ್ದಾಳೆ!

Trending videos

Back to Top