ಮುತ್ತಿಕ್ಕಿಕೊಂಡ ಕಾಡೆಮ್ಮೆ, ಚಿರತೆ
Team Udayavani, May 17, 2018, 5:48 AM IST
ಮಾನವ ಪ್ರಂಪಂಚದಲ್ಲಿ ಯಾವುದು ವಿವಾದಕ್ಕೆ ಕಾರಣವಾಗಬಹುದೋ ಅಂಥದ್ದು ಪ್ರಾಣಿ ಪ್ರಪಂಚದಲ್ಲಿ ನಡೆದರೆ ಅಚ್ಚರಿ ಎನಿಸಿಕೊಳ್ಳುತ್ತದೆ. ದಕ್ಷಿಣ ಆಫ್ರಿಕಾದಲ್ಲಿಯ ಕಾಡಿನಲ್ಲಿ ಚಿರತೆ ಮತ್ತು ಕಾಡೆಮ್ಮೆ ಪರಸ್ಪರ ಮುತ್ತಿಕ್ಕಿಕೊಂಡಿವೆ. ಇಡೀ ಜಗತ್ತು ಇದೊಂದು ಅಚ್ಚರಿ ಎಂಬಂತೆ ನೋಡುತ್ತಿದೆ. ಹಸಿದ ಕಾಡೆಮ್ಮೆಗಳ ಗುಂಪಿನಿಂದ ತಪ್ಪಿಸಿಕೊಳ್ಳಲು ಗಂಡು ಚಿರತೆಯೊಂದು ಒಣಗಿದ್ದ ಮರವನ್ನು ಏರಿತ್ತು. ಕಾಡೆಮ್ಮೆ ದಂಡು ಮರದ ಸುತ್ತಲೂ ಚಿರತೆಗಾಗಿ ಕಾದು ನಿಂತವು. ಕೊಂಬೆಯೊಂದರ ತುದಿಗೆ ಬಂದ ಚಿರತೆ ಕಾಡೆಮ್ಮೆಯನ್ನು ಮೂಸಲು ಪ್ರಯತ್ನಿಸಿತು, ಅದೇ ವೇಳೆ ಎಮ್ಮೆ ತನ್ನ ತಲೆ ಎತ್ತಿದಾಗ, ಅದರ ಬಾಯಿಗೆ ಚಿರತೆ ಬಾಯಿ ತಾಕಿದ್ದು, ಈ ಕ್ಷಣವನ್ನು ಬೆನ್ನೆಟ್ ಮಥೋನ್ಸಿ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ.