ಅರಣ್ಯ ಸಂರಕ್ಷಿಸಲು ಬುಲ್ಡೋಜರ್ ಜತೆ ಕಾದಾಟ
Team Udayavani, Jun 8, 2018, 11:00 AM IST
ನಾವು ಮಾನವರು ಅರಣ್ಯ ರಕ್ಷಣೆ ಬಗ್ಗೆ ದೊಡ್ಡ ದೊಡ್ಡ ಭಾಷಣ ಮಾಡುತ್ತಲೇ ಸದ್ದಿಲ್ಲದೇ ಅರಣ್ಯ ನಾಶ ಮಾಡುತ್ತಿರುತ್ತೇವೆ. ಮನುಷ್ಯರು ಪರಿಸರದ ವಿಷಯವಾಗಿ ತೋರುವ ಕಾಳಜಿಗಿಂತ ನೂರು ಪಟ್ಟು ಕಾಳಜಿ ಪ್ರಾಣಿಗಳು ತೋರುತ್ತವೆ ಎಂಬುದಕ್ಕೆ ನಿದರ್ಶನ ಇಲ್ಲಿದೆ. ಇಂಡೋನೇಷ್ಯಾದ ಕಾಡೊಂದರ ಒರಂಗುಟಾನ್ವೊಂದು ಮರಗಳನ್ನು ಧರೆಗುರುಳಿಸುತ್ತಿದ್ದ ಬುಲ್ಡೋಜರ್ ಅನ್ನು ತಡೆಯುವ ಪ್ರಯತ್ನದಲ್ಲಿ
ನಿರತವಾಗಿದ್ದ ಹೃದಯವಿದ್ರಾವಕ ದೃಶ್ಯವೊಂದರ ವಿಡಿಯೋ ಈಗ ವೈರಲ್ ಆಗಿದೆ. ಒಂಟಿ ಒರಂಗುಟಾನ್ ತನ್ನ ಸಹಜವಾದ ವಾಸ ತಾಣವನ್ನು ರಕ್ಷಿಸಲು ದೈತ್ಯ ಬುಲ್ಡೋಜರ್ಗೆ ಸಾಧ್ಯವಾದಷ್ಟೂ ತಡೆ ಒಡ್ಡುತ್ತದೆ. ಈ ಘಟನೆ 2013ರಲ್ಲಿ ನಡೆದಿತ್ತು ಎನ್ನಲಾಗಿದೆ. ಅಂತಾರಾಷ್ಟ್ರೀಯ ಪ್ರಾಣಿ ರಕ್ಷಣಾ ಸಂಘಟನೆ ಈ ವಿಡಿಯೋವನ್ನು 2 ದಿನಗಳ ಹಿಂದೆ ಬಿಡುಗಡೆ ಮಾಡಿದೆ.