CONNECT WITH US  
echo "sudina logo";

ಕಾರು ಕದ್ದ ಕಳ್ಳನ ಬಳಿ ಇದ್ದದ್ದು ಪ್ರೀತಿಯ ಕೋತಿ

ಕಾರು ಕಳ್ಳರ ಸಂಖ್ಯೆ ಅಮೆರಿಕದಲ್ಲೇನೂ ಕಡಿಮೆಯಿಲ್ಲ. ಇತ್ತೀಚೆಗೆ ಫ್ಲೋರಿಡಾದಲ್ಲಿ ಕಾಡಿ ಬ್ಲೇಕ್‌ ಹೆಶನ್‌ ಎಂಬ ಹೆಸರಿನ ಕಾರುಗಳ್ಳನನ್ನು ಪೊಲೀಸರು ಕಾರಿನ ಸಮೇತ ಹಿಡಿದರು. ಆದರೆ ಆ ವೇಳೆ ಮನಕಲಕುವ ಘಟನೆ ನಡೆದಿದೆ. ಪೊಲೀಸರು ಕಾರನ್ನು ವಶಕ್ಕೆ ತೆಗೆದುಕೊಂಡ ವೇಳೆ ಅವರಿಗೆ ಕಾರಿನಲ್ಲಿದ್ದ ಅಪರೂಪದ ಮಂಗವೊಂದು ಕಂಡಿದೆ. ಪೊಲೀಸರನ್ನು ನೋಡುತ್ತಲೇ ಅದು ತನ್ನ ಮಾಲೀಕ ಕಾಡಿಯ ಹೆಗಲೇರಿ ಆತನನ್ನು ಬಿಟ್ಟುಕೊಡಲಾರೆ ಎಂಬಂತೆ ತಬ್ಬಿಕೊಳ್ಳುತ್ತದೆ. ಆತ ಪ್ರಾಣಿ ಸಾಕಲು ಹೊಂದಬೇಕಾದ ಪರವಾನಗಿಯನ್ನು ಹೊಂದಿಲ್ಲವೆಂದು ತಿಳಿದ ಪೊಲೀಸರು, ಕಾರಿನ ಜೊತೆ ಮಂಗನನ್ನೂ ಕರೆದುಕೊಂಡು ಹೋಗುತ್ತಾರೆ. ಮಂಗ ತನ್ನ ಮಾಲೀಕನಿಂದ ಬೇಡದ ಮನಸ್ಸಿನಿಂದ ದೂರಾಗುವ ವಿಡಿಯೋ ಈಗ ವೈರಲ್‌ ಆಗಿದೆ.

Trending videos

Back to Top