CONNECT WITH US  
echo "sudina logo";

ಬಿಎಂಡಬ್ಲ್ಯೂ ಕಾರಿನಲ್ಲಿ ಇರಿಸಿ ಮೃತದೇಹ ಸಮಾಧಿ!

"ಊರು ಉಪಕಾರ ಅರಿಯದು, ಹೆಣ ಸಿಂಗಾರ ಅರಿಯದು' ಅಂತ ಕನ್ನಡದಲ್ಲಿ ಒಂದು ಗಾದೆ ಇದೆ. ಪಾಪ ದೂರದ ನೈಜೀರಿಯಾ ವ್ಯಕ್ತಿಗೆ ಇದು ಗೊತ್ತಿರಲು ಹೇಗೆ ಸಾಧ್ಯ? ನೈಜೀರಿಯಾದ ವ್ಯಕ್ತಿ ಅಝುಬುಯಿಕೆ ತನ್ನ ತಂದೆಯ ಕಳೇಬರವನ್ನು 60 ಲಕ್ಷ ರೂ. ಮೌಲ್ಯದ ಐಷಾರಾಮಿ ಹೊಚ್ಚ ಹೊಸ ಬಿಎಂಡಬ್ಲೂé ಕಾರಿನಲ್ಲಿ ಇರಿಸಿ ಸಮಾಧಿ ಮಾಡಿದ್ದಾನೆ. ಇದು ಇಡೀ ಪ್ರಪಂಚದಾದ್ಯಂತ ಸುದ್ದಿಯಾ ಗಿದೆ. ಅಗಲಿದ ತಂದೆಗೆ ಸೂಕ್ತ ಗೌರವ ನೀಡಬೇಕೆಂದು ತೀರ್ಮಾನಿಸಿ, ಶವಪಟ್ಟಿಗೆ ಬದಲು ಕಾರನ್ನು ಬಳಸಿದರಂತೆ.

ಟ್ವೀಟಿಗರು ಈ ಕೃತ್ಯವನ್ನು ಗೇಲಿ ಮಾಡುತ್ತಿದ್ದಾರೆ. "ಪೋಷಕರು ಬದುಕಿದ್ದಾಗ ಅವರಿಗೆ ಹೊಸ ಕಾರು ಖರೀದಿಸಬೇಕು, ಸತ್ತ ಮೇಲೆ ಹೂಳಲು ಅಲ್ಲ' ಎಂದು ಒಬ್ಬರು ಟ್ವೀಟಿಸಿದ್ದಾರೆ.

Trending videos

Back to Top