CONNECT WITH US  

4ನೇ ಮಹಡಿ ಅಂಚಿನಲ್ಲಿ ನೇತಾಡಿದ ಕಾರು

ಬೆಟ್ಟದ ತುತ್ತ ತುದಿಯಲ್ಲಿ ಕಾರೊಂದು ನೇತಾಡುತ್ತಿರುವುದು, ಒಳಗಿರುವ ನಾಯಕ ನಟ ಆಶ್ಚರ್ಯಕರ ರೀತಿಯಲ್ಲಿ ಪಾರಾಗುವುದನ್ನು ನಾವು ಸಿನಿಮಾಗಳಲ್ಲಿ ನೋಡಿಯೇ ಇರುತ್ತೇವೆ. ಅಂಥದ್ದೇ ಘಟನೆ ಕ್ಯಾಲಿಫೋರ್ನಿಯಾದಲ್ಲಿ ನಡೆದಿದೆ.

ಇದು ಯಾರನ್ನೋ ಮೆಚ್ಚಿಸಲು ಮಾಡಿರುವ ಸಾಹಸ ದೃಶ್ಯ ಅಲ್ಲ. ವೃದ್ಧ ಮಹಿಳೆಯೊಬ್ಬರು ಕಟ್ಟಡದ ನಾಲ್ಕನೇ ಮಹಡಿಯಲ್ಲಿ ಕಾರನ್ನು ನಿಲ್ಲಿಸಲು ಬ್ರೇಕ್‌ ಒತ್ತುವ ಬದಲು ಆ್ಯಕ್ಸಿಲೇಟರ್‌ ಒತ್ತಿ ಕಾರು ಕಟ್ಟಡದ ಅಂಚಿಗೆ ಬಂದು ನಿಂತಿತ್ತು. ಅಷ್ಟು ಸಾಲದು ಎಂದು ಕಾರು ಅತ್ತಿಂದಿತ್ತ ಹೊಯ್ದಾಡುತ್ತಿತ್ತು. ಕಾರಿನೊಳಗಿದ್ದವರಿಗೆ ತಾವು ಜೀವಂತವಾಗಿ ಹೊರ ಬರುವ ಊಹೆಯೂ ಇರಲಿಲ್ಲಂತೆ. ಆದರೆ ಸ್ಥಳೀಯರು ಉಪಾಯವಾಗಿ ಕಾರಿನಲ್ಲಿದ್ದವರನ್ನು ರಕ್ಷಿಸಿದ್ದಾರೆ. ಕಡೆಗೆ ಅಗ್ನಿ ಶಾಮಕರು ಕಾರನ್ನೂ ರಕ್ಷಿಸಿದ್ದಾರಂತೆ.

Trending videos

Back to Top