ಕದ್ದ ಕ್ಯಾಮೆರಾದಿಂದ ಮಾಲೀಕನಿಗೆ ದೃಶ್ಯ ಕಳಿಸಿದ
Team Udayavani, Jun 24, 2018, 7:08 AM IST
ಕಳ್ಳ ಕಳ್ಳತನ ಮಾಡಿದ ಜಾಗದಲ್ಲಿ ಏನಾದರೊಂದು ಸುಳಿವು ಬಿಟ್ಟೇ ಹೋಗಿರುತ್ತಾನೆ ಎಂಬ ಮಾತೊಂದಿದೆ. ಚೀನಾ ಶಾಂಘೈ ನಗರದ ಕಳ್ಳನೊಬ್ಬ ಸುಳಿವು ಬಿಟ್ಟು ಹೋಗುವುದಿರಲಿ, ತಾನು ಕನ್ನ ಹಾಕಿದ ಮನೆಗೆ ತನ್ನ ಚಟುವಟಿಕೆಗಳನ್ನು ನೇರ ಪ್ರಸಾರ ಮಾಡುತ್ತಿದ್ದ! ಏನಿದು ಪ್ರಕರಣ ಎಂದು ಕೇಳುತ್ತೀರಾ? ಕಳ್ಳನೊಬ್ಬ ಮನೆಯೊಂದರಿಂದ ಸಿಸಿಟಿವಿ ಕ್ಯಾಮೆರಾವನ್ನು ಕದ್ದು ತಂದಿದ್ದ. ಆತ ಅದನ್ನು ಕದ್ದು ಮಾರುವ ಬದಲಾಗಿ ತನ್ನ ಮನೆಗೆ ಅದನ್ನು ಅಳವಡಿಸಿದ್ದ.
ಆತನ ಮನೆಯಲ್ಲಿ ನಡೆಯುವ ಪ್ರತಿಯೊಂದು ಚಟುವಟಿಕೆಗಳ ದೃಶ್ಯವೂ ಸಿಸಿಟಿವಿಯ ಮಾಲೀಕರಿಗೆ ರವಾನೆಯಾಗುತ್ತಿತ್ತು. ಕಳ್ಳ ಕ್ಯಾಮೆರಾದ ಐಪಿ ವಿಳಾಸವನ್ನು ಬದಲಿಸದೇ ಕ್ಯಾಮೆರಾವನ್ನು ತನ್ನ ಮನೆಗೆ ಅಳವಡಿಸಿದ್ದೇ ಇದಕ್ಕೆಲ್ಲಾ ಕಾರಣ. ಮಾಲೀಕರು ಪೊಲೀಸರಿಗೆ ದೂರು ನೀಡಲಾಗಿ, ಕಳ್ಳ ಪೊಲೀಸರಿಗೆ ಸುಲಭದ ತುತ್ತಾದ.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
21 ಕಾಂಗ್ರೆಸ್ ಅಭ್ಯರ್ಥಿ ಪಟ್ಟಿ ಇಂದು?ದಿಲ್ಲಿಯಲ್ಲಿ ಮಂಗಳವಾರ ಪಕ್ಷದ ಚುನಾವಣ ಸಮಿತಿ ಸಭೆ
AI; ನಿಮ್ಮ ಮಕ್ಕಳ ‘ಧ್ವನಿ’ ಕೇಳಿ ಮೋಸ ಹೋಗದಿರಿ ಜೋಕೆ!
Kerala-ಕರ್ನಾಟಕ-ತಮಿಳುನಾಡು ತ್ರಿಜಂಕ್ಷನ್: ಮತ್ತೆ ನಕ್ಸಲರ ಸದ್ದು?
Lok Sabha ಅಖಾಡಕ್ಕೆ ಲಾಲು ಪ್ರಸಾದ್ ಪುತ್ರಿ ಡಾ| ರೋಹಿಣಿ ಹೆಜ್ಜೆ
Infosys; 4 ತಿಂಗಳ ಮೊಮ್ಮಗನಿಗೆ 243 ಕೋಟಿ ರೂ.ಷೇರು ಗಿಫ್ಟ್ ನೀಡಿದ ಮೂರ್ತಿ