ಬೆಂಜ್ ಕೊಂಡ 88ರ ರೈತ
Team Udayavani, Jul 8, 2018, 5:11 AM IST
ಬಾಲ್ಯದಲ್ಲಿ ಕಂಡ ಹಲವಾರು ಕನಸುಗಳು ನಾವು ಬೆಳೆದಂತೆ ಮನಸ್ಸಿನಿಂದ ಅಳಿಸಿಹೋಗುತ್ತವೆ. ಆದರೆ ಇದಕ್ಕೆ ಅಪವಾದ ತಮಿಳುನಾಡಿನ 88 ವರ್ಷ ವಯಸ್ಸಿನ ರೈತ ದೇವರಾಜನ್ ಎಚ್. ಇವರು 8ನೇ ವಯಸ್ಸಿನವರಿರುವಾಗ ಮರ್ಸಿಡೆಸ್ ಬೆಂಜ್ ಕಾರು ಕೊಳ್ಳುವ ಕನಸು ಕಂಡಿದ್ದರಂತೆ. ಈಗ, ಅಂದರೆ 80 ವರ್ಷಗಳ ಬಳಿಕ ಆ ಕನಸನ್ನು
ಈಡೇರಿಸಿಕೊಂಡಿದ್ದಾರೆ.
8ನೇ ವಯಸ್ಸಿನಲ್ಲಿದ್ದಾಗ ಒಮ್ಮೆ ಈ ಕಾರನ್ನು ಅವರು ನೋಡಿದ್ದರಂತೆ. ಆಗ ಇದು ಯಾವ ಕಾರು ಎಂದೇ ತಿಳಿದಿರಲಿಲ್ಲವಂತೆ. ಯಾವ ಕಾರೆಂದು ಪತ್ತೆ ಮಾಡಿ, ಜೀವಮಾನದಲ್ಲಿ ಅದರ ಮಾಲೀಕನಾಗಬೇಕು ಎಂದು
ಪಣತೊಟ್ಟಿದ್ದ ಅವರು, ಈಗ ಮರ್ಸಿಡೆಸ್-ಬೆಂಜ್ ಬಿ-ಕ್ಲಾಸ್ ಕಾರನ್ನು ಖರೀದಿಸಿದ್ದಾರೆ. ಕಾರಿನ ಡೀಲರ್ಶಿಪ್
ಈ ಸಂಭ್ರಮ ಆಚರಿಸಿ ವಿಡಿಯೋ ಬಿಡುಗಡೆ ಮಾಡಿದೆ.