CONNECT WITH US  

ಷರೀಫ್ ಗೆ ಜೈಲು ಶಿಕ್ಷೆ: ಕೇಕ್‌ ತಯಾರಿಸಿ ಸಂಭ್ರಮ

ಅಕ್ರಮ ಆಸ್ತಿ ಮಾಡಿದ ತಪ್ಪಿಗಾಗಿ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್‌ ಷರೀಫ್ ಅವರಿಗೆ 10 ವರ್ಷ ಜೈಲು ಶಿಕ್ಷೆಯಾಗಿದ್ದಕ್ಕೆ ಅವರ ರಾಜಕೀಯ ವಿರೋಧಿ ಇಮ್ರಾನ್‌ ಖಾನ್‌ ಖುಷಿಪಟ್ಟರೋ ಇಲ್ಲವೋ ಗೊತ್ತಿಲ್ಲ. ಆದರೆ, ದುಬೈನ ಖಾದಿಜಾ ಅಹ್ಮದ್‌ ಎಂಬ ಹವ್ಯಾಸಿ ಕೇಕ್‌
ತಯಾರಕಿಯೊಬ್ಬರು ಈ ಆದೇಶವನ್ನು ವಿಶೇಷವಾಗಿ ಆಚರಿಸಿದ್ದಾರೆ. ವಿಶೇಷವಾದ, ವೃತ್ತಾಕಾರದ  ಕೇಕ್‌ ಅನ್ನು ತಯಾರಿಸಿ ಅದರ ಮೇಲೆ ನವಾಜ್‌ ಷರೀಫ್ ಕಂಬಿ ಹಿಂದೆ ಇರುವಂತಿರುವ ಕಾಟೂìನ್‌ ಚಿತ್ರ ಬಿಡಿಸಿದ್ದಾರೆ. ಇದಕ್ಕೆ "ಬಿಹೈಂಡ್‌ ದ ಬಾರ್ಸ್‌' ಎಂಬ ಶೀರ್ಷಿಕೆಯನ್ನೂ
ಇಟ್ಟಿದ್ದಾರೆ. ಸುಮಾರು 3 ಕೆ.ಜಿ. ತೂಕವಿರುವ, ವೆನಿಲ್ಲಾ ಫ್ಲೇವರ್‌ನ ಈ ಕೇಕ್‌ ಬರೋಬ್ಬರಿ 5,600 ರೂ.ಗಳಿಗೆ ಮಾರಾಟವಾಗಿದೆ.

Trending videos

Back to Top