CONNECT WITH US  

ವಿಶ್ವದ ಅತಿ ಕುರೂಪಿ ನಾಯಿ ಸಾವು

ಕೆಳ ತಿಂಗಳ ಹಿಂದೆಯಷ್ಟೇ ವಿಶ್ವದ ಅತಿ ಕುರೂಪಿ ನಾಯಿ ಎಂಬ ಕಿರೀಟ ಧರಿಸಿ ಜಗತ್ತಿನ ಗಮನ ಸೆಳೆದ 9 ವರ್ಷದ
ನಾಯಿ ಕಳೆದ ವಾರ ಮೃತಪಟ್ಟಿದೆ.

ಝಾಝಾ ಎಂಬ ಇಂಗ್ಲಿಷ್‌ ಬುಲ್‌ ಡಾಗ್‌ ನೋಡಲು ತೀರಾ ಕುರೂಪಿಯಾಗಿದ್ದ ನಾಯಿ. ಜೊಲ್ಲು ಸುರಿಸುತ್ತಾ ಸೊಟ್ಟ ಕಾಲುಗಳಿಂದ ತೆವಳುತ್ತಿತ್ತು. ತನ್ನ ರೂಪಕ್ಕೆ ತಕ್ಕಂತೆ ಕ್ಯಾಲಿಫೋರ್ನಿಯಾದಲ್ಲಿ ನಡೆದ ಸ್ಪರ್ಧೆಯಲ್ಲಿ ವಿಶ್ವದ ಅತಿ ಕುರೂಪಿ ನಾಯಿ ಎಂಬ ಪಟ್ಟ ಪಡೆದಿತ್ತು. ಕಳೆದ ವಾರ ಮಲಗಿದಲ್ಲಿಯೇ ಇಹಲೋಕ ತ್ಯಜಿಸಿದೆ ಎಂದು ಇದರ ಮಾಲೀಕರು ಹೇಳಿದ್ದಾರೆ.

ಝಾಝಾಳ ಬಾಯಿ ಉದ್ದಕ್ಕೆ ಸೀಳಿದಂತಿದ್ದರಿಂದ ಅದಕ್ಕೆ ನಾಲಿಗೆ ಒಳಹಾಕಲು ಅಗುತ್ತಿರಲಿಲ್ಲ. ಆಹಾರ
ಸೇವಿಸಲೂ ಪ್ರಯಾಸ ಪಡುತ್ತಿತ್ತು ಎಂದು ಮಾಲೀಕರು ಹೇಳಿದ್ದಾರೆ.

Trending videos

Back to Top