CONNECT WITH US  

ಮದುವೆಯಾಗ್ಬೇಕಾದ್ರೆ ಬಿರಿಯಾನಿ ಮಾಡ್ಕೊಡ್ಬೇಕು!

ಮದುವೆಯಾಗಬೇಕಾದರೆ ಇಂಪ್ರಸ್‌ ಮಾಡಬೇಕು. ಅದು ಹುಡುಗ-ಹುಡುಗಿ ಇಬ್ಬರಿಗೂ ಅನ್ವಯ. ಪಾಕಿಸ್ತಾನದಲ್ಲಿ ಅಂಥ ಘಟನೆ ನಡೆದಿದೆ. ಅಳಿಯನಾಗಲಿರುವ ವ್ಯಕ್ತಿಗೆ ಹುಡುಗಿಯ ಏಳು ಮಂದಿ ಸಹೋದರರು ಹಲವು ರೀತಿಯ ಪರೀಕ್ಷೆಗಳನ್ನು ಒಡ್ಡಿದ್ದರು. ಆದರೆ ಅದರಲ್ಲಿ ಆತ
ಉತ್ತೀರ್ಣನಾಗಲಿಲ್ಲ. ಕೊನೆಗೆ ಆತ ವಿಶೇಷ ರೀತಿಯ ಬಿರಿಯಾನಿ ಸಿದ್ಧಪಡಿಸಿ ಕುಟುಂಬಕ್ಕೆ ನೀಡಲು ಸಿದ್ಧನಾದ. ಆ ವಿಡಿಯೋ ಈಗ ಪಾಕಿಸ್ತಾನದಾದ್ಯಂತ ವೈರಲ್‌ ಆಗಿದೆ. ಇದು ವರೆಗೆ ಎಂಟು ಮಿಲಿಯದಷ್ಟು ಜನರು ಅದನ್ನು ವೀಕ್ಷಿಸಿದ್ದಾರೆ. ಜತೆಗೆ 2.5 ಲಕ್ಷ ಮಂದಿ ಅದಕ್ಕೆ ವಿವಿಧ ರೀತಿಯ ಪ್ರತಿಕ್ರಿಯೆಯನ್ನು ಕೂಡ ನೀಡಿದ್ದಾರೆ. ಜತೆಗೆ 30 ಸಾವಿರದಷ್ಟು ಷೇರ್‌ ಆಗಿದೆ. ಅದನ್ನು ಪದೇ ಪದೆ ನೋಡುತ್ತಿದ್ದೇನೆ. ಮೆಚ್ಚುಗೆಯಾಗಿದೆ ಎಂದು ಫೇಸ್‌ಬುಕ್‌ ವೀಕ್ಷಕರೊಬ್ಬರು ಬರೆದುಕೊಂಡಿದ್ದಾರೆ. 

Trending videos

Back to Top