ಹುಲಿ, ತೋಳಗಳನ್ನು ಶಾಲೆಗೇ ಕರೆತಂದ ಸಿಬಂದಿ
Team Udayavani, Jul 22, 2018, 5:49 AM IST
ಶಾಲೆಗಳಲ್ಲಿ ಮಕ್ಕಳಿಗೆ ವನ್ಯ ಜೀವಿಗಳ ಬಗ್ಗೆ ಪಾಠ ಮಾಡುವಾಗ ಅವುಗಳ ಚಿತ್ರಗಳನ್ನು ತೋರಿಸಿ ಅವುಗಳನ್ನು
ಪರಿಚಯಿಸುವುದು ಎಲ್ಲೆಡೆ ರೂಢಿಯಲ್ಲಿದೆ. ಆದರೆ, ಫ್ಲೋರಿಡಾದ ಮಿಯಾಮಿಯಲ್ಲಿನ ಕ್ರಿಸ್ಟೋಫರ್ ಕೊಲಂಬಸ್ ಹೈಸ್ಕೂಲ್ನ ಸಿಬಂದಿ, ವನ್ಯ ಜೀವಿಗಳನ್ನು ಶಾಲೆಗೇ ಕರೆಯಿಸಿ ಮಕ್ಕಳಿಗೆತೋರಿಸುವ ಪ್ರಯತ್ನ ಮಾಡಿ ವಿವಾದಕ್ಕೆ ಈಡಾಗಿದ್ದಾರೆ.
ಖಾಸಗಿ ಮನೋರಂಜನಾ ಸಂಸ್ಥೆ ಯೊಂದಿಗೆ ಒಪ್ಪಂದ ಮಾಡಿಕೊಂಡು ಹುಲಿ, ಕಾಡುಪಾಪ, ಗಿಳಿ, ತೋಳ
ಮುಂತಾದ ಪ್ರಾಣಿ ಪಕ್ಷಿಗಳನ್ನು ಪಂಜರಗಳಲ್ಲಿ ಇರಿಸಿ ಶಾಲೆಗೆ ತರಿಸಲಾಗಿತ್ತು. ಶುಕ್ರವಾರ ಶಾಲೆಯ ಕಾರಿಡಾರ್ಗಳಿಗೆ ಬಂದಿದ್ದ ಈ ಪ್ರಾಣಿಗಳು ರವಿವಾರದವರೆಗೆ ಅಲ್ಲೇ ಇದ್ದವು. ಶಾಲೆಗೆ ಕಾಡುಪ್ರಾಣಿಗಳನ್ನು ತಂದಿದ್ದು ಈಗ ಮಕ್ಕಳ ಪೋಷಕರ ಕೆಂಗಣ್ಣಿಗೆ ಗುರಿಯಾಗಿದೆ.