CONNECT WITH US  

ಪ್ರಾಣಕ್ಕೆ ಎರವಾಯ್ತು"ಸ್ನೇಕ್‌ ವೈನ್‌' ಆಸೆ

ದಕ್ಷಿಣ ಚೀನಾದ ಗುವಾಂಗ್‌ಡಂಗ್‌ನಲ್ಲಿ ಹಾವಿನ ವಿಷದಿಂದ ಪಾರಂಪರಿಕ ವೈನ್‌ ತಯಾರಿಸಲು ಹೋಗಿದ್ದ 21 ವಯಸ್ಸಿನ ಗೃಹಿಣಿಯೊಬ್ಬಳು ಅದೇ ಹಾವಿನಿಂದ ಕಚ್ಚಿಸಿಕೊಂಡು ಸಾವನ್ನಪ್ಪಿದ್ದಾರೆ.

ಈ ಹಾವನ್ನು ಆಕೆ ಆನ್‌ಲೈನ್‌ನಲ್ಲಿ ಆರ್ಡರ್‌ ಮಾಡಿ ತರಿಸಿದ್ದರು! ಝುವಾನ್‌ ಝುವಾನ್‌ ಎಂಬ ಚೀನಾದ ಇ-ಕಾಮರ್ಸ್‌ ಜಾಲತಾಣದ ಮೂಲಕ ಈ ಮಹಿಳೆ ಹಾವನ್ನು ಖರೀದಿಸಿದ್ದರು. ಈ ಮಹಿಳೆಯ ವಿಳಾಸಕ್ಕೆ ಬಂದಿದ್ದ ರಟ್ಟಿನ ಬಾಕ್ಸ್‌ನಲ್ಲಿ ಹಾವಿದೆ ಎಂದು ಖುದ್ದು ಡೆಲಿವರಿ ಸಿಬ್ಬಂದಿಗೂ ಗೊತ್ತಿರಲಿಲ್ಲ! ಹಣ ನೀಡಿ ಬಾಕ್ಸ್‌ ಪಡೆದು ಒಳನಡೆದ ಮಹಿಳೆ ಆ ಹಾವನ್ನು ಹೊರತಗೆಯುವಾಗಲೇ ಹಾವು ಆಕೆಗೆ ಕಚ್ಚಿ ಪರಾರಿಯಾಗಿದೆ ಎಂದು ಹೇಳಲಾಗಿದೆ.

ಹಾವುಗಳನ್ನು ಆಲ್ಕೋಹಾಲ್‌ನಲ್ಲಿ ಮುಳುಗಿಸಿಟ್ಟು ಸ್ನೇಕ್‌ ವೈನ್‌ ತಯಾರಿಸುವ ಪ್ರಾಚೀನ ಪದ್ಧತಿ ದಕ್ಷಿಣ ಏಷ್ಯಾ
ರಾಷ್ಟ್ರಗಳಲ್ಲಿ ಈಗಲೂ ಚಾಲ್ತಿಯಲ್ಲಿದೆ.


Trending videos

Back to Top