ಕತ್ತೆಗೆ ಬಣ್ಣ ಬಳಿದು ಜೀಬ್ರಾ ಮಾಡಿರುವ ಶಂಕೆ !
Team Udayavani, Jul 28, 2018, 3:25 AM IST
ಕತ್ತೆ, ಜೀಬ್ರಾಗಳು ಒಂದೇ ಜಾತಿಗೆ ಸೇರಿದ ಪ್ರಾಣಿಗಳಾದ್ದರಿಂದ ಬಣ್ಣ ಬಿಟ್ಟರೆ ಆಕೃತಿಯಲ್ಲಿ ಯಾವುದೇ ವ್ಯತ್ಯಾಸ ಇಲ್ಲ. ಈಜಿಪ್ಟ್ ನ ಕೈರೊ ನಗರದ ಮೃಗಾಲಯದಲ್ಲಿ ಕತ್ತೆಯೊಂದಕ್ಕೆ ಜೀಬ್ರಾ ರೀತಿ ಬಣ್ಣ ಬಳಿಯಲಾಗಿದೆ ಎಂದು ಆರೋಪಿಸಲಾಗಿದೆ. ಇದೇ ಕಾರಣಕ್ಕೆ ಈ ಮೃಗಾಲಯ ಈಗ ಭಾರಿ ಪ್ರಸಿದ್ಧಿ ಪಡೆಯುತ್ತಿದೆ. ಈ ಊಹಾಪೋಹ ಹಬ್ಬಲು ಕಾರಣ ಮಹಮ್ಮದ್ ಸಹ್ರಾನ್ ಎಂಬ ಬಾಲಕ. ಈತ ಜೀಬ್ರಾ ಫೋಟೊ ಪೋಸ್ಟ್ ಮಾಡಿ, ಕತ್ತೆಗೆ ಬಣ್ಣ ಬಳಿದು ಹೇಸರಗತ್ತೆ ಎಂದು ವೀಕ್ಷಕರನ್ನು ನಂಬಿಸುತ್ತಿದ್ದಾರೆ ಎಂದು ಬರೆದಿದ್ದ. ಅದಕ್ಕೆ ತಕ್ಕಂತೆ ಜೀಬ್ರಾದ ಕಿವಿ, ಗೊರಸು ಕತ್ತೆಯ ಕಿವಿ ಗೊರಸನ್ನೇ ಹೋಲುತ್ತದೆ. ಆದರೆ ಬಣ್ಣ ಬಳಿದಿರುವ ವಿಚಾರವನ್ನು ಮೃಗಾಲಯ ತಳ್ಳಿಹಾಕಿದೆ.