CONNECT WITH US  

ಐವರು ಪ್ರೇಯಸಿಯರ ಖುಷಿಗಾಗಿ ಕಳ್ಳತನ

ತನ್ನ ಐವರು ಗರ್ಲ್ಫ್ರೆಂಡ್‌ಗಳನ್ನು ಖುಷಿಪಡಿಸಲೆಂದು ಹಣ ಸಂಪಾದಿಸಲು ಕಳ್ಳತನ ಮಾಡುತ್ತಿದ್ದ ವ್ಯಕ್ತಿ ಈಗ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಕಳ್ಳ ಏಕಕಾಲದಲ್ಲಿ 5 ಪ್ರೇಯಸಿಯರ ನ್ನು ಹೊಂದಿದ್ದನೇ ಎಂದು ಹುಬ್ಬೇರಿಸತ್ತಿದ್ದೀರಿ ಅಲ್ಲವೇ? ಕಳ್ಳನ ವಯಸ್ಸು ಕೇಳಿದರೆ ಹೌಹಾರುತ್ತೀರಿ. ಈ ಕಳ್ಳ 63 ವರ್ಷ ವಯಸ್ಸಿನವನು.

ಈ ಹಿರಿಯ ನಾಗರಿಕ ತನ್ನ ಮನ್ಮಥ ರೂಪದಿಂದಾಗಲೀ ಅಥವಾ ಹಣದಿಂದಾಗಲೀ ಮಹಿಳೆಯರನ್ನು ಸೆಳೆಯುತ್ತಿಲ್ಲ. ಈತ ಉತ್ತಮ ಮೈಕಟ್ಟು ಹೊಂದಿದ್ದಾನೆ ಮತ್ತು ಕೂದಲಿಗೆ ಬಣ್ಣ ಹಚ್ಚಿದ್ದಾನೆ ಅಷ್ಟೆ. ಕಳ್ಳ ಬಂಧು ಸಿಂಗ್‌ ದಿಲ್ಲಿಯ ಸ್ಲಮ್‌ ಒಂದರಲ್ಲಿ ವಾಸಿಸುತ್ತಿದ್ದ. ಸುಮಾರು ದಶಕದ ಹಿಂದೆ ಈತನ ಬಳಿ ಹಣವಿಲ್ಲವೆಂದು ಈತನ ಪ್ರೇಯಸಿ ಬಿಟ್ಟು ಹೋಗಿದ್ದಳು. ಹಣವಿದ್ದರೆ ಎಷ್ಟು ಬೇಕಾದರೂ ಪ್ರೇಯಸಿಯರನ್ನು ಹೊಂದಬಹುದು ಎಂದು ಕಳ್ಳತನಕ್ಕಿಳಿದನಂತೆ. ಭಾರೀ ಜಾಗರೂಕತೆಯಿಂದ ಕಳ್ಳತನ ಮಾಡುತ್ತಿದ್ದ ಆತ ಈವರೆಗೂ ಸಿಕ್ಕಿಬಿದ್ದಿರಲಿಲ್ಲ. ಸಿಸಿಟಿವಿ ದೃಶ್ಯಾವಳಿ ಆಧಾರದ ಮೇಲೆ ಪೊಲೀಸರು ಈತನನ್ನು ಸೆರೆಹಿಡಿದಿದ್ದಾರೆ.

ಈತನಿಗೆ 28ರಿಂದ 40 ವರ್ಷ ವಯೋ ಮಾನದ ಪ್ರೇಯಸಿಯರಿದ್ದಾರೆ. ಅವರಿಗೆ ಈತ ಕಳ್ಳ ಎಂಬು ದಾಗಲೀ, ಬಹು ಪ್ರೇಯಸಿಯರನ್ನು ಹೊಂದಿರುವುದಾಗಲೀ ತಿಳಿದಿಲ್ಲ

Trending videos

Back to Top