CONNECT WITH US  

ಅಲಸ್ಕಾದಿಂದ ರಷ್ಯಾಗೆ ಪುಟ್ಟ ದೋಣಿಯಲ್ಲಿ ವ್ಯಕ್ತಿಯ ಯಾನ

ಅಮೆರಿಕದ ವ್ಯಕ್ತಿಯೊಬ್ಬರು ಪುಟ್ಟ ದೋಣಿಯಲ್ಲಿ ತೇಲುತ್ತಾ ಬಂದು ರಷ್ಯಾದ ಪೂರ್ವ ಕರಾವಳಿಯ ನಿರ್ಜನ ಪ್ರದೇಶಕ್ಕೆ ಬಂದು ತಲುಪಿದ್ದಾರೆ. ರಷ್ಯಾದ ವಿದೇಶಾಂಗ ಸಚಿವಾಲಯ ಇವರನ್ನು ಅಲಾಸ್ಕಾದ ಆ್ಯಂಕೊರೇಜ ನಿವಾಸಿ ಮಾರಿಯಾ ಜಕಾರೊವ(46) ಎಂದು ಗುರುತಿಸಿದೆ. ಅವರು ಯಾವುದೋ ದಾಖಲೆ ಬರೆಯಲೆಂದೋ ಅಥವಾ ಸಾಧನೆ ಮಾಡಲೆಂದೋ ಈ ಸಾಹಸ ಗೈದಿದ್ದಲ್ಲವಂತೆ. ಇವರು ಅಲಾಸ್ಕದ ಯುಕೊನ್‌ ನದಿಯಲ್ಲಿ ತಮ್ಮ ಏಕ-ವ್ಯಕ್ತಿ ದೋಣಿಯಲ್ಲಿ ವಿಹಾರ ನಡೆಸುತ್ತಿದ್ದ ವೇಳೆ ಹವಾಮಾನ ವೈಪರೀತ್ಯದಿಂದಾಗಿ ಇವರು ನದಿಯಿಂದ ಬೇರ್ಪಟ್ಟು ಅಲಾಸ್ಕಾ ಸಮುದ್ರಕ್ಕೆ ಬಂದಿದ್ದಾರೆ. ಇವರ ಬಳಿ ತಮ್ಮನ್ನು ರಕ್ಷಿಸಿಕೊಳ್ಳಲು ಯಾವ ತಂತ್ರಜ್ಞಾನ ಕೂಡ ಇರಲಿಲ್ಲ.

ಅಲಾಸ್ಕಾದಿಂದ ರಷ್ಯಾವರೆಗೆ ಹಲವಾರು ದಿನಗಳ ಕಾಲ ಇವರು ದೋಣಿಯಲ್ಲಿ ತೇಲಿದ್ದಾರೆ. ಹಲವಾರು ದಿನಗಳ ಕಾಲ ಸಮುದ್ರದಲ್ಲಿ ಪುಟ್ಟ ದೋಣಿಯಲ್ಲಿ ತೇಲಿದ ಇವರು ಬದುಕಿ ಉಳಿದಿರುವುದೇ ಆಶ್ಚರ್ಯ ಎಂದು ಅಧಿಕಾರಿಗಳು ಹೇಳಿದ್ದಾರೆ. ಜುಕಾರೊವ ಅವರ ದೇಹಾರೋಗ್ಯ ಕೂಡ ಸ್ಥಿರವಾಗಿದೆ. ಇನ್ನಷ್ಟು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.


Trending videos

Back to Top