ಮುಂಬೈ ಪೊಲೀಸರಿಗೆ ತಿರುಗುಬಾಣವಾಯ್ತು ಹೆಲ್ಮೆಟ್‌ ಟ್ವೀಟ್‌! | Udayavani - ಉದಯವಾಣಿ
   CONNECT WITH US  
echo "sudina logo";

ಮುಂಬೈ ಪೊಲೀಸರಿಗೆ ತಿರುಗುಬಾಣವಾಯ್ತು ಹೆಲ್ಮೆಟ್‌ ಟ್ವೀಟ್‌!

ನೀವು ಎಷ್ಟೇ ಸಶಕ್ತರಾದರೂ ಸರಿ, ಹೆಲ್ಮೆಟ್‌ ಧರಿಸುವುದನ್ನು ಮರೆಯಬೇಡಿ! ಹೀಗೆಂದು ಜನಪ್ರಿಯ ಹಾಲಿವುಡ್‌ ಸಿನೆಮಾ ಥಾರ್‌ನ ದಿ ಹಲ್ಕ್ ಕ್ಯಾರೆಕ್ಟರ್‌ನ ಹೆಲ್ಮೆಟ್‌ ಧರಿಸಿದ ಚಿತ್ರವನ್ನು ಪ್ರಕಟಿಸಿದ ಮುಂಬೈ ಪೊಲೀಸರು ಈಗ ಹೆಲ್ಮೆಟ್‌ನಿಂದಲೇ ಮುಖ ಮರೆಸಿಕೊಂಡು ಓಡಾಡುವಂತಾಗಿದೆ.

ಹೆಲ್ಮೆಟ್‌ ಬಗ್ಗೆ ಇವರ ಸಂದೇಶಕ್ಕೆ ಕೆಲವರು ಮೆಚ್ಚುಗೆಯನ್ನೇನೋ ವ್ಯಕ್ತಪಡಿಸಿದ್ದಾರೆ. ಆದರೆ ಇನ್ನೂ ಕೆಲವರು ನೀವೇ ಹೆಲ್ಮೆಟ್‌ ಹಾಕ್ಕೊಳಲ್ವಲಲ್ರಿ ಅಂತ ಪುರಾವೆಯೊಂದಿಗೆ ಟ್ವೀಟ್‌ ಮಾಡಿ ಮಾನ ತೆಗೆದಿದ್ದಾರೆ. ಇನ್ನೂ ಕೆಲವರು ಕ್ರಿಯಾ ಶೀಲ ಟ್ವೀಟ್‌ ಮಾಡಿದ್ದಾರೆ.

ಹಲ್ಕ್ ಹೆಲ್ಮೆಟ್‌ ಧರಿಸಿ ಹೊಡೆ ದಾಡಲು ಹೋಗುತ್ತದೆ. ನಾವು ಹೊಡೆದಾಡಲು ಹೋದರೆ ನೀವೇ ಬಂದು ಹಿಡಿದುಕೊಂಡು ಹೋಗುತ್ತೀರಿ ಎಂದೂ ಟ್ವೀಟ್‌ ಮಾಡಿದ್ದಾರೆ.

Trending videos

Back to Top