ವ್ಯಕ್ತಿಯನ್ನು ಅಟ್ಟಾಡಿಸಿದ ಮರಿ ಅಳಿಲು ;ಪೊಲೀಸರಿಗೆ ಕರೆ!
Team Udayavani, Aug 12, 2018, 6:04 AM IST
ಜರ್ಮನ್ನ ಧೈರ್ಯಶಾಲಿ ಪೊಲೀಸರು ಅಳಿಲು ಮರಿಯೊಂದರಿಂದ ಹಿಂಬಾಲಿಸಲ್ಪಡುತ್ತಿದ್ದ ವ್ಯಕ್ತಿಯೊಬ್ಬರನ್ನು ರಕ್ಷಿಸಿದ್ದಾರೆ. ಅಳಿಲು ಮರಿ ವ್ಯಕ್ತಿಯನ್ನು ಅಟ್ಟಾಡಿಸಿಕೊಂಡು ಹೋಗುತ್ತಿತ್ತು ಎಂದರೆ ನೀವು ನಂಬಲಿಕ್ಕಿಲ್ಲ.
ವ್ಯಕ್ತಿ ಪೊಲೀಸರಿಗೆ ಕರೆ ಮಾಡಿ, ನನ್ನನ್ನು ಅಳಿಲು ಮರಿ ಅಟ್ಟಾಡಿಸುತ್ತಿದೆ. ನನ್ನನ್ನು ಕಾಪಾಡಿ ಎಂದು ದೂರು ನೀಡಿದಾಗಲೂ ಪೊಲೀಸರು ನಂಬಲಿ ಲ್ಲವಂತೆ. ಬಳಿಕ ಆ ವ್ಯಕ್ತಿ ಹೇಳಿದ ಜಾಗಕ್ಕೆ ಬಂದು ನೋಡಿದಾಗ ಪುಟ್ಟ ಮರಿ ಆಳೆತ್ತರದ ವ್ಯಕ್ತಿಯನ್ನು ಇನ್ನಿಲ್ಲದಂತೆ ಗೋಳು ಹೊಯ್ದುಕೊಳ್ಳುತ್ತಿತ್ತಂತೆ. ಅದನ್ನು ಹಿಡಿಯಬೇಕು ಎನ್ನುವಷ್ಟರಲ್ಲಿ ಆಗಲೇ ಬಳಲಿದ್ದ ಮರಿ ನಾಟಕೀಯ ರೀತಿಯಲ್ಲಿ ಅಲ್ಲೇ ಜಾಗ ಮಾಡಿಕೊಂಡು ಜೋರು ನಿದ್ದೆಗೆ ಜಾರಿತಂತೆ.
ಈ ಮರಿಯನ್ನು ಈಗ ಕಾರ್ಲ್ ಸ್ರುಹ್ ಪೊಲೀಸರು ದತ್ತು ತೆಗೆದುಕೊಂಡಿದ್ದಾರೆ. ಪ್ರಾಣಿ ಹಕ್ಕು ಸಂಘಟನೆಯೊಂದು ಇದನ್ನು ನೋಡಿಕೊಳ್ಳುತ್ತಿದೆಯಂತೆ.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ
Modi ಹಸಿ ಸುಳ್ಳು: ಸಿಎಂ ಸಿದ್ದರಾಮಯ್ಯ ಕೆಂಡ; ಒಬಿಸಿ, ಎಸ್ಸಿ ಮೀಸಲಾತಿ ಹೇಳಿಕೆಗೆ ವಿರೋಧ
Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ
Lok Sabha Election; ಹಂತ 1: 14 ಕ್ಷೇತ್ರಗಳ ಬಹಿರಂಗ ಪ್ರಚಾರ ಅಂತ್ಯ: ನಾಳೆ ಮತದಾನ
ಅನಂತಸ್ವಾಮಿ ಧಾಟಿಯಲ್ಲೇ ನಾಡಗೀತೆ; ರಾಜ್ಯ ಸರಕಾರದ ಆದೇಶ ಎತ್ತಿಹಿಡಿದ ಹೈಕೋರ್ಟ್