ಪ್ರವಾಹದ ನೀರಲ್ಲೇ ನಡೆದು ಬಂದು ಮದುವೆಯಾದರು!
Team Udayavani, Aug 13, 2018, 6:06 AM IST
ಇದನ್ನು ಮಳೆಯದಲ್ಲ, ನೆರೆಯ ಮದುವೆ ಎಂದು ಕರೆಯಬಹುದೇನೋ? ಏಕೆಂದರೆ, ಈ ದಂಪತಿ ಮಳೆ, ಪ್ರವಾಹವನ್ನೂ ಲೆಕ್ಕಿಸದೇ ಮದುವೆಯಾಗಿದ್ದಾರೆ. ಮಳೆಗಾಲದಲ್ಲಿ ಯಾರೂ ಮದುವೆ ಆಗೋಲ್ಲವೇ ಎಂದು ಕೇಳಬೇಡಿ. ಆಗುತ್ತಾರೆ. ಆದರೆ, ಫಿಲಿಪ್ಪೀನ್ನ ಈ ಜೋಡಿ,
ಚರ್ಚ್ನೊಳಗೆ ಪ್ರವಾಹದ ನೀರು ತುಂಬಿದ್ದರೂ, ಆ ನೀರಿನಲ್ಲೇ ನಡೆದು ಕೊಂಡು ಬಂದು ವಿವಾಹವಾಗಿದ್ದಾರೆ. ಕೆಲವರು ಮೇಕಪ್ ಹಾಳಾಗುತ್ತದೆಂದು ಮಳೆಗಾಲದಲ್ಲಿ ಮನೆಯ ಹೊರಗೆ ಕಾಲಿಡಲೂ ಹಿಂಜರಿಯುವಾಗ, ಈ ವಧು ಡೆಲಾಸ್ ಏಂಜೆಲಸ್ ಬಿಳಿ ಬಣ್ಣದ ಉದ್ದನೆಯ ಗೌನ್ ಧರಿಸಿಕೊಂಡು ಮೊಣಕಾಲು ವರೆಗೆ ನೀರಿದ್ದರೂ, ಪ್ರವಾಹದ ನೀರಿನಲ್ಲೇ ನಗುನಗುತ್ತಾ ನಡೆದುಕೊಂಡು ಬಂದಿದ್ದಾರೆ. ಗೌನ್ ಒದ್ದೆಯಾದ ಕಾರಣ ಸ್ವಲ್ಪ ಭಾರವೆನಿಸಿತಾದರೂ, ನನಗೆ ಕೆಂಪುಹಾಸಿನಲ್ಲೇ ನಡೆದಷ್ಟು ಸಂತೋಷವಾಯಿತು ಎಂದಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗಿದೆ.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
ಮಂಡ್ಯದಲ್ಲಿ ಐಸ್ ಕ್ರೀಂ ತಿಂದು ಅವಳಿ ಮಕ್ಕಳ ಸಾವು, ತಾಯಿ ಅಸ್ವಸ್ಥ
Panaji: ಸರಕಾರದ ಆ್ಯಪ್ ನಿಂದಾಗಿ ದೂಧ್ ಸಾಗರ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯ ಇಳಿಕೆ
Shimoga; ವಿರೋಧ ಪಕ್ಷದವರಿಗೆ ಅಪಪ್ರಚಾರವೇ ಕೊನೆಯ ಅಸ್ತ್ರ: ಬಿವೈ ರಾಘವೇಂದ್ರ
Chamarajanagar: ಮೇವಿಗಾಗಿ ಕಬ್ಬಿನ ತೊಂಡೆಗೆ ಬೇಡಿಕೆ ಹೆಚ್ಚಳ
Bengaluru: ಅತಿಕ್ರಮಿಸಿ ಏರ್ಪೋರ್ಟ್ನಲ್ಲಿ ವಿಡಿಯೋ: ಯುಟ್ಯೂಬರ್ ಬಂಧನ