CONNECT WITH US  

ಪ್ರವಾಹದಲ್ಲಿ ಸಿಕ್ಕಿ ಹಾಕಿಕೊಂಡ ವಧು

ಸ್ನೇಹಿತರಿಗಾಗಿ ಮದುವೆ ಪಾರ್ಟಿ ಏರ್ಪಡಿಸಿ ವಧುವೇ ಸಮಾರಂಭ ನಡೆಯುವ ಸ್ಥಳಕ್ಕೆ ಹೋಗಲು ಅಸಾಧ್ಯವಾದರೆ ಹೇಗಾಗುತ್ತದೆ? ಅಮೆರಿಕದ ನ್ಯೂಜರ್ಸಿಯ ಬೊಗಾಟದಲ್ಲಿ ಇಂಥಾ ಘಟನೆ ನಡೆದಿದೆ.

ಏಕಾಏಕಿ ಜೋರಾಗಿ ಮಳೆ ಬಂದು ಹ್ಯಾಕೆನ್ಸಾಕ್‌ ನದಿಯಲ್ಲಿ ಬಂದಿದ್ದರಿಂದ ವಧು ಕಾರ್ಯಕ್ರಮ ಸ್ಥಳಕ್ಕೆ ಹೋಗಲು
ಅಸಾಧ್ಯವಾಯಿತು. ವಿವಾಹದ ಗೌನ್‌ ಧರಿಸಿ ಕಾರ್‌ನಲ್ಲಿ ಹೊರಟ ವೇಳೆ ಆಕೆ ಪ್ರವಾಹದಲ್ಲಿ ಸಿಕ್ಕಿ ಕಂಗಾಲಾಗಿದ್ದಳು. ಪಾರ್ಟಿ ಮಾಡುವುದಿರಲಿ, ಒಮ್ಮೆ ಸುರಕ್ಷಿತವಾಗಿ ಇಲ್ಲಿಂದ ಪಾರಾದರೆ ಸಾಕು ಎಂಬಂತಿತ್ತು ಅವಳ ಸ್ಥಿತಿ. ಮಾಹಿತಿ ಸಿಕ್ಕ
ಬೊಗಾಟ ಪೊಲೀಸರು ಆಕೆಯನ್ನು ರಕ್ಷಿಸಿದ್ದಾರೆ. ಪೊಲೀಸರ ವಾಹನದಲ್ಲಿ ಕುಳಿತುಕೊಳ್ಳುತ್ತಿರುವಂತೆಯೇ ದುಬಾರಿ
ಬೆಲೆಯ ಚಪ್ಪಲಿ ಬಿಸಾಕಿದ್ದಾಳೆ ವಧು.


Trending videos

Back to Top