CONNECT WITH US  

ಸಿರಿಂಜ್‌ಗಳ ರಾಶಿಯ ಮಧ್ಯೆ ನವಜಾತ ಶಿಶು

ವಿವಿಧ ವೈದ್ಯಕೀಯ ಪ್ರಯೋಗಗಳು, ಹಲವು ಗರ್ಭಪಾತಗಳ ನಂತರ ಜನಿಸಿದ ಮಗುವನ್ನು ಸಿರಿಂಜುಗಳ ಮಧ್ಯೆಯೇ ಮಲಗಿಸಿ ಫೋಟೋ ತೆಗೆದರೆ ಹೇಗಿರುತ್ತದೆ? ಅಮೆರಿಕದ ಅರಿಜೋನಾ ದಂಪತಿಗೆ ಅನಿಸಿದ್ದೂ ಇದೆ. 4 ವರ್ಷಗಳವರೆಗೆ ಐವಿಎಫ್ ಸೇರಿದಂತೆ ವಿವಿಧ ಸಂತಾನ ಚಿಕಿತ್ಸೆ ಪಡೆದ ದಂಪತಿ ಕೊನೆಗೂ ಮಗುವನ್ನು ಪಡೆದಿದ್ದಾರೆ. ಈ ಪ್ರಕ್ರಿಯೆಯಲ್ಲಿ ಪ್ಯಾಟ್ರೀಸಿಯಾ ಚುಚ್ಚಿಸಿಕೊಂಡ ಚುಚ್ಚುಮದ್ದುಗಳ ಸಿರಿಂಜಿನ ಸಂಖ್ಯೆ 1616. ಈ ಸಿರಿಂಜುಗಳಷ್ಟನ್ನೂ ಕಾದಿಟ್ಟುಕೊಂಡ ಆಕೆ ಮಗು ಜನಿಸಿದ ನಂತರ ಅದನ್ನು ಹೃದಯದ ಆಕೃತಿಯಲ್ಲಿ ಇಟ್ಟು ಮಧ್ಯೆ ಮಗುವನ್ನು ಮಲಗಿಸಿ ಫೋಟೊ ತೆಗೆಸಿಕೊಂಡಿದ್ದಾರೆ. ಆರಂಭದಲ್ಲಿ ಇದನ್ನು ಮನೆಯಲ್ಲಿಟ್ಟುಕೊಳ್ಳೋಣ ಎಂದುಕೊಂಡಿದ್ದರೂ, ಅದು ಹೇಗೋ ಸೋಷಿಯಲ್‌ ಮೀಡಿಯಾದ ಕೈಗೆ ಸಿಕ್ಕು ವೈರಲ್‌ ಆಗಿದೆ.

Trending videos

Back to Top