ಚರ್ಚ್‌ನಲ್ಲಿ ಕಳವು ಮಾಡಿ ಕ್ಷಮಾಪಣೆ ಪತ್ರ ಇಟ್ಟು ಹೋದ !

ಕಳವು ಮಾಡಿದ ಸ್ಥಳದಲ್ಲಿ ಕಳ್ಳರು ಏನಾದರೂ ಸುಳಿವು ಬಿಟ್ಟು ಹೋಗುತ್ತಾರೆ ಎಂಬುದು ಹಳೇಯ ಮಾತು. ಆದರೆ ಇಲ್ಲಿ ಕೊಂಚ ಭಿನ್ನವಾಗಿದೆ. ಇಲ್ಲಿನ ಪ್ರಕರಣದಲ್ಲಿ ಕ್ಷಮಾಪಣೆ ಪತ್ರ ಬಿಟ್ಟು ಹೋಗಿರುವುದೇ ಹೊಸ ಟ್ರೆಂಡ್.
ಅಮೆರಿಕದ ಕನೆಕ್ಟಿಕಟ್‌ನಲ್ಲಿರುವ ಚರ್ಚ್‌ನಲ್ಲಿ ಕಳವು ಮಾಡಿದ ವ್ಯಕ್ತಿ, ಸಾವಿರಾರು ಡಾಲರ್ ಮೊತ್ತದ ವಸ್ತುಗಳನ್ನು ಕದ್ದೊಯ್ದಿದ್ದಾನೆ. ಹೊರಡುವಾಗ ಒಂದು ಹಾಳೆಯ ಮೇಲೆ "ಪ್ರೇ ಫಾರ್ ಮಿ, ಸಾರಿ ಬ್ರದರ್. ಸೇವ್ ಮಿ' ಎಂದು ಕ್ಷಮಾಪಣೆ ಕೇಳಿದ್ದಾನೆ. ಈ ಕೃತ್ಯದ ಸಿಸಿಟಿವಿ ದೃಷ್ಯಗಳನ್ನು ಪೊಲೀಸರು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇತ್ತೀಚೆಗಷ್ಟೇ ಕೇರಳದ ಮನೆಯೊಂದರಿಂದ ಚಿನ್ನಾಭರಣ ಕದ್ದ ಕಳ್ಳ 2 ದಿನಗಳ ಬಳಿಕ ಕ್ಷಮಾಪಣೆ ಪತ್ರದೊಂದಿಗೆ ಅವನ್ನು ಹಿಂದಿರುಗಿಸಿದ್ದ.