ಅಪ್ಪ ಬರೆದ ಮಗಳ ಸಿವಿ ಈಗ ವೈರಲ್
Team Udayavani, Aug 24, 2018, 4:18 AM IST
ಉದ್ಯೋಗಾಕಾಂಕ್ಷಿಗಳು ತಮ್ಮ ಸ್ವವಿವರ ಪಟ್ಟಿ ರಚಿಸುವಾಗ ಶೇ.100ರಷ್ಟು ಸತ್ಯವನ್ನೇ ನಮೂದಿಸುತ್ತಾರೆ ಎಂಬ ಗ್ಯಾರಂಟಿ ಇಲ್ಲ. ಇಂಗ್ಲೆಂಡ್ನ ಹದಿಹರೆಯದ ಹುಡುಗಿಯೊಬ್ಬಳು ತಾನೇ ತನ್ನ ಸಿವಿ ಅನ್ನು ಬರೆಯದೇ ತನ್ನ ತಂದೆಯ ಕೈಯಿಂದ ಬರೆಸಿದ್ದಾಳೆ. ಆಕೆಯ ತಂದೆ ತುಸು ಹೆಚ್ಚೇ ಪ್ರಾಮಾಣಿಕವಾಗಿ ಸಿವಿ ತಯಾರಿಸಿದ್ದಾರೆ. ಈಗ ಅದು ವೈರಲ್ ಆಗಿದೆ.
ಮೇಲ್ನೋಟಕ್ಕೆ ಸಂಪೂರ್ಣ ಔಪಚಾರಿಕವಾಗಿ ಕಾಣುವ ಸಿವಿಯಲ್ಲಿ ಉಪಶೀರ್ಷಿಕೆಗಳ ಕೆಳಗೆ ತಮ್ಮ ಮಗಳ ಕೌಶಲ್ಯಗಳು, ಅರ್ಹತೆಗಳನ್ನು ಪಟ್ಟಿ ಮಾಡಿರುವ ಅವರು, ಶೈಕ್ಷಣಿಕ ಅರ್ಹತೆ ಪಟ್ಟಿಯಲ್ಲಿ ಮಗಳು 2 ವಿಷಯಗಳಲ್ಲಿ ಅನುತ್ತೀರ್ಣಳಾಗಿರುವುದನ್ನು ದಾಖಲಿಸಿದ್ದಾರೆ.
ಕಚೇರಿ ಸಹಾಯ ಪಟ್ಟಿಯಲ್ಲಿ ಸದಾ ಫೇಸ್ಬುಕ್ ಜಾಲಾಡುವುದು, ಹೇಳಿದ ಮಾತು ಕೇಳಲ್ಲ… ಹೀಗೆ ತಮ್ಮ ಮಗಳ ಗುಣಗಳನ್ನೂ ನಮೂದಿಸಿದ್ದಾರೆ. ಕೌಶಲ್ಯಗಳ ಪಟ್ಟಿಯಲ್ಲಿ ಸೋಮಾರಿತನ, ತಡ, ಆಸಕ್ತಿ ಇಲ್ಲದಿರುವುವಿಕೆ, ಒರಟು, ದ್ವೇಷ ಮನೋಭಾವ ಎಂದು ಸೇರಿಸಿದ್ದಾರೆ. ಜವಾಬ್ದಾರಿಗಳ ಪಟ್ಟಿಯಲ್ಲಿ ಗುಂಡಿಗಳನ್ನು ಅಗೆದು ಚಿನ್ನ ಹುಡುಕುವುದು, ಯಾವುದಕ್ಕೂ ಉತ್ತರಿಸದೇ ಇರುವುದು ಎಂದು ಬರೆದಿದ್ದಾರೆ.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ