ಟ್ರಂಪ್ಗೆ ದೇಶದ ಧ್ವಜ ಹೇಗಿದೆ ಎಂದೇ ಗೊತ್ತಿಲ್ಲ!
Team Udayavani, Aug 27, 2018, 5:57 AM IST
ಅಮೆರಿಕದ ಧ್ವಜ ಜಗತ್ತಿನ ಎಲ್ಲಾ ದೇಶಗಳ ಧ್ವಜಗಳ ಮಧ್ಯೆ ಬಹುತೇಕ ಸುಲಭವಾಗಿ ಗುರುತಿಸಲ್ಪಡುತ್ತದೆ. ಆದರೆ ಪಾಪ, ಅಮೆರಿಕ ಅಧ್ಯಕ್ಷರೇ ಅವರ ಧ್ವಜ ಹೇಗಿದೆ ಎಂದು ಗುರುತಿಸುವಲ್ಲಿ ವಿಫಲರಾಗಿದ್ದಾರೆ. ಹೌದು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗ ಟ್ವಿಟರ್ನಲ್ಲಿ ಭಾರೀ ಗೇಲಿಗೆ ಒಳಗಾಗಿದ್ದಾರೆ. ಟ್ರಂಪ್ ಮತ್ತು ಅವರ ಪತ್ನಿ ಮೆಲಾನಿಯಾ ಓಹಿಯೋದ ಮಕ್ಕಳ ಆಸ್ಪತ್ರೆಯೊಂದಕ್ಕೆ ಭೇಟಿ ನೀಡಿದ್ದರು. ಅಲ್ಲಿ ಅವರು ಮಕ್ಕಳೊಂದಿಗೆ ಧ್ವಜದ ಚಿತ್ರ ಬಿಡಿಸಿದ್ದರು. ಅಮೆರಿಕ ಧ್ವಜದಲ್ಲಿ ಕೆಂಪು ಮತ್ತು ಬಿಳಿ ಪಟ್ಟಿ, ನೀಲಿ ಬಣ್ಣದ ಚೌಕಾಕೃತಿಯಲ್ಲಿ 50 ಬಿಳಿ ನಕ್ಷತ್ರಗಳಿವೆ. ಆದರೆ ಟ್ರಂಪ್ ಧ್ವಜದಲ್ಲಿ ಕೆಂಪು ಪಟ್ಟಿ ಜೊತೆ ನೀಲಿ
ಪಟ್ಟಿಗಳೂ ಸೇರಿರುವುದು ನಗೆಪಾಟಲಿಗೀಡಾಗಿದೆ.