ಸಚಿವ ಸರಿಯಿಲ್ಲ ಎಂದು 2 ವರ್ಷ ರಜೆ ಕೇಳಿದ ಅಧಿಕಾರಿ
Team Udayavani, Aug 29, 2018, 6:33 AM IST
ಪಾಕಿಸ್ತಾನಿ ರೈಲ್ವೇ ಉದ್ಯೋಗಿಯ ರಜೆ ಅರ್ಜಿ ಈಗ ಜಗತ್ತಿನಾದ್ಯಂತ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅವರು ಹೊಸದಾಗಿ ನೇಮಕವಾಗಿರುವ ರೈಲೇ ಸಚಿವರ ಅಡಿ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ರಜೆ ಅರ್ಜಿ ನೀಡಿದ್ದಾರೆ. ಇದರಲ್ಲಿ ಅಂಥ ವಿಶೇಷವೇನಿದೆ ಎನ್ನುತ್ತೀರಾ?ವಿಶೇಷವಿರುವುದು ಅವರು ಎಷ್ಟು ದಿನಗಳ ಮಟ್ಟಿಗೆ ರಜೆ ಕೋರಿದ್ದಾರೆ ಎನ್ನುವುದರಲ್ಲಿ. ಅವರು ರಜೆ ಕೇಳಿರುವುದು ಬರೋಬ್ಬರಿ 730 ದಿನ. ಅಂದರೆ 2 ವರ್ಷ!
ವೈರಲ್ ಆಗಿರುವ ಪತ್ರದಲ್ಲಿ ಅವರು, ಪಾಕಿಸ್ತಾನದ ನಾಗರಿಕ ಸೇವೆಯ ಗೌರವಾನ್ವಿತ ಸದಸ್ಯನಾಗಿರುವ ನನಗೆ ಹೊಸದಾಗಿ ರೈಲ್ವೇ ಸಚಿವರಾಗಿ ನೇಮಕವಾಗಿರುವ ಶೇಕ್ ರಶೀದ್ ಜೊತೆ ಕೆಲಸ ಮಾಡಲು ಸಾಧ್ಯವಿಲ್ಲ. ಅವರಿಗೆ ಸ್ವಲ್ಪವೂ ವೃತ್ತಿಪರತೆ ಇಲ್ಲ. ಅವರ ನಡುವಳಿಕೆ ಕೂಡ ಸರಿಯಿಲ್ಲ. ಹಾಗಾಗಿ ನನಗೆ 730 ದಿನ ರಜೆ ಬೇಕು ಎಂದು ಬರೆದಿದ್ದಾರೆ. ಅವರ ಪತ್ರದಲ್ಲಿ ಸಚಿವರನ್ನು ದೂರಿರುವುದನ್ನು ಜನ ಒಪ್ಪಿಕೊಂಡಿದ್ದರೂ, ಅದಕ್ಕಾಗಿ 2 ವರ್ಷಗಳ ಕಾಲ ರಜೆ ಕೇಳಿದ್ದನ್ನು ಗೇಲಿ ಮಾಡಿದ್ದಾರೆ.