CONNECT WITH US  

ಹೈಹೀಲ್ಸ್‌ ಧರಿಸಿ ಗಿಡ ನೆಟ್ಟ ಮೆಲಾನಿಯಾ

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸಾಮಾಜಿಕ ಜಾಲತಾಣಗಳಲ್ಲಿ ಗೇಲಿಗೊಳಗಾಗುವುದು ತಿಳಿದೇ ಇದೆ. ಅವರ ಪತ್ನಿ ಮೆಲಾನಿಯಾ ಟ್ರಂಪ್‌ ಕೂಡ ಟ್ರೋಲ್‌ಗೆ ಒಳಗಾಗುವುದರಲ್ಲಿ ಹಿಂದೆ ಬಿದ್ದಿಲ್ಲ. ಇತ್ತೀಚೆಗೆ ಮೆಲಾನಿಯಾ ಶ್ವೇತಭವನದ ತೋಟದಲ್ಲಿ ಗಿಡ ನೆಟ್ಟು, ಆ ಫೋಟೊಗಳನ್ನು ಟ್ವಿಟರ್‌ನಲ್ಲಿ ಹೆಮ್ಮೆಯಿಂದ ಪೋಸ್ಟ್‌ ಮಾಡಿದ್ದರು. ಅವರು ನಾಲ್ಕು ಇಂಚಿನ ಸ್ಟಿಲಿಟೋಸ್‌ ಹೀಲ್ಸ್‌ ಧರಿಸಿದ್ದರು. ತೋಟದಲ್ಲಿ ಹೀಲ್ಸ್‌ ಧರಿಸಿ ಅವರು ಸಲಿಕೆ ಹಿಡಿದಿರುವುದನ್ನು ನೋಡಿ ಜಾಲತಾಣಿಗರು ಹಾಸ್ಯ ಮಾಡಿದ್ದಾರೆ. ಅದೂ ಅಲ್ಲದೇ ಅವರು ಧಸಿರುವ ವಸ್ತ್ರ ಕೂಡ ಸುಮಾರು 50,000 ರೂ. ಬೆಲೆ ಬಾಳುತ್ತದೆ. ಇದಕ್ಕೂ ಹಿಂದೆ ಶುಭ್ರವಾದ ಶೂ ಧರಿಸಿ ತೋಟದ ಕೆಲಸ ಮಾಡುವ ಫೋಟೊ ಹಾಕಿ ಗೇಲಿಗೊಳಗಾಗಿದ್ದರು.


Trending videos

Back to Top