ಇತರರಿಗೆ ಸ್ಫೂರ್ತಿಯಾದ ದಿವ್ಯಾಂಗಿಗಳ ವಿಡಿಯೋ
Team Udayavani, Sep 21, 2018, 4:56 AM IST
ದಿವ್ಯಾಂಗಿಗಳ ಸಾಮರ್ಥ್ಯವನ್ನು ಯಾರೂ ಅಲ್ಲಗಳೆಯುವಂತಿಲ್ಲ. ಜಗತ್ತಿನಲ್ಲಿ ಮಹತ್ತರ ಸಾಧನೆಗಳು ದಿವ್ಯಾಂಗಿಗಳಿಂದ ನಡೆದಿವೆ. ಅಮೆರಿಕದ ಮೇರಿ ಫ್ರೀ ಬೆಡ್ ರಿಹ್ಯಾಬಿಲಿಟೇಷನ್ ಆಸ್ಪತ್ರೆ ಯೆಂಬ ದಿವ್ಯಾಂಗದವರ ತರಬೇತಿ ಸಂಸ್ಥೆ ಇತ್ತೀಚೆಗಷ್ಟೇ ನೃತ್ಯದ ವಿಡಿಯೋವನ್ನು ಹೊರಬಿಟ್ಟಿದೆ.
ವೀಲ್ಚೇರ್ಗಳ ಮೇಲೆ ಕುಳಿತ ಹಲವಾರು ವಿಶೇಷ ಮಕ್ಕಳು, ಯುವಕ, ಯುವತಿಯರು ಆತ್ಮವಿಶ್ವಾಸದ ನೃತ್ಯ ಪ್ರದರ್ಶನ ನೀಡಿದ್ದಾರೆ.ಜೊತೆಗೆ ಅವರಿಗೆ ತರಬೇತಿ ನೀಡುವ ಆಸ್ಪತ್ರೆಯ ವೈದ್ಯರು, ಸಿಬ್ಬಂದಿ ಕೂಡ ದಿವ್ಯಾಂಗಿಗಳ ಜೊತೆ ವಿಶೇಷವಾಗಿ ಕಾಣಿಸಿ ಕೊಂಡಿದ್ದಾರೆ. ಈ ವಿಡಿಯೋ ಹೆಸರು “ಮಿರ್ಯಾಕಲ್ಸ್ ಇನ್ ಮೋಷನ್’. ಈ ವಿಡಿಯೋ ಜಗತ್ತಿನಾದ್ಯಂತ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ. ಈ ವಿಡಿಯೋಗಾಗಿ ಆಸ್ಪತ್ರೆಯ ದಿವ್ಯಾಂಗಿ ಸದಸ್ಯರು ಕೇವಲ ಒಂದು ವಾರದಲ್ಲಿ ತಯಾರಾಗಿದ್ದಾರಂತೆ.